ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ..
ಇದೀಗ ತಮ್ಮ ಡಿಲೆವರಿ ಸಮಯದ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಸಂಜನಾ… ಸಂಜಾನಗೆ ಸಿಸರೇನ್ ಆಗಿದ್ದು ,,, ಸಿಸರೇನ್ ಸಮಯದ ವಿಡಿಯೋ ಇದಾಗಿದೆ.. ಮಗುವನ್ನ ಹೊರ ತೆಗೆದು ಒಕ್ಕಳ ಬಳ್ಳಿ ಕತ್ತರಿಸಿರುವ ವಿಡಿಯೋವನ್ನ ಹಂಚಿಕೊಂಡಿದ್ದು , ವೈದ್ಯರಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.. ಅವರಿಗೆ ನೆಟ್ಟಿಗರು ನಾನಾ ಕಮೆಂಟ್ ಗಳನ್ನ ಮಾಡ್ತಿದ್ದಾರೆ..
ಅಂದ್ಹಾಗೆ ಸಂಜನಾ ಮಗುವಿಗೆ ಜನ್ಮ ನೀಡಿದ ನಂತರವೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ… ಸಿಸರೇನ್ ಮೂಲಕ ಜನ್ಮ ನೀಡಿದ್ದಾರೆ ಎಂದು ಊಹಿಸಲು ಕಷ್ಟವಾಗ್ತಿದೆ.. ಇದೇ ರೀತಿಯಾದ ಕಮೆಂಟ್ ಗಳನ್ನ ಮಾಡುತ್ತಾ ಸಂಜನಾಗೆ ಹಾಗೂ ಮಗುವಿನ ಭವಿಷ್ಯಕ್ಕೆ ಶುಭ ಹಾರೈಸುತ್ತಿದ್ದಾರೆ..
ಅಂದ್ಹಾಗೆ ಇತ್ತೀಚೆಗೆ ಪ್ರಣಿತಾ ಅವರು ಸಹ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು , ಅವವರೂ ಸಹ ತಮ್ಮ ಡಿಲೆವರಿ ಸಮಯದಲ್ಲಿ ಆಪರೇಷನ್ ಥಿಯೇಟರ್ ಒಳಗಿನ ಹಾಗೂ ಮಗುವಿನ ವಿಡಿಯೋ ತಣುಕನ್ನ ಹಂಚಿಕೊಂಡಿದ್ದರು..