Prabhas : ಪ್ರಭಾಸ್ ‘ಸ್ಪಿರಿಟ್’ ನಲ್ಲಿ ಕರೀನಾ ಹೀರೋಯಿನ್..??
ಬಾಹುಬಲಿ ಸಿನಿಮಾದ ಮೂಲಕ ಪ್ರಭಾಸ್ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಪ್ರಸ್ತುತ ಪಾನ್ ಇಂಡಿಯಾ ಹೀರೋಗಳ ಪೈಕಿ ಎಲ್ಲರಿಗಿಂತ ಮುಂದೆ ಇದ್ದಾರೆ.
ಬಾಹುಬಲಿ 2 ಪಾನ್ ಇಂಡಿಯಾ ಮಾರ್ಕೆಟ್ ಆಗಿ ಬಂದ ಸಾಹೋ, ರಾಧೆಶ್ಯಾಮ್ ಡಿಜಾಸ್ಟರ್ಸ್ ಆಗಿವೆ.
ಆದ್ರೂ ಕೂಡ ಪ್ರಭಾಸ್ ಇಮೇಜ್ ಮಾತ್ರ ಕಡಿಮೆ ಆಗಿಲ್ಲ.
ಸದ್ಯ ಆದಿಪುರುಷ್ , ಸಲಾರ್ ನಲ್ಲಿ ಬ್ಯುಸಿಯಾಗಿರೋ ಪ್ರಭಾಸ್ ಮುಂದೆ ಸ್ಪಿರಿಟ್ ಸಿನಿಮಾದಲ್ಲೂ ಮಾಡ್ತಾ ಇದ್ದಾರೆ.. ಈ ಸ್ಪಿರಿಟ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ..
ನಟಿ ಕರೀನಾ ಕಪೂರ್ ಸ್ಪಿರಿಟ್ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗ್ತಿದೆ. ಪ್ರಭಾಸ್ ಜೊತೆಗೆ ಕರೀನಾ ಕಪೂರ್ ನಟಿಸುವುದು ಪಕ್ಕಾ ಎಂದೇ ಹೇಳಲಾಗ್ತಿದೆ..
ಸ್ಪಿರಿಟ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಪ್ರಸ್ತುತ ಕರೀನಾ ಲಾಲ್ ಸಿಂಗ್ ಚಡ್ಡಾದಲ್ಲಿ ಅಮಿರ್ ಖಾನ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.. ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ..