PS – 1 : ಸೋಷಿಯಲ್ ಮೀಡಿಯಾದಲ್ಲಿ ‘ಪೊನ್ನಿಯನ್ ಸೆಲ್ವನ್ – 1’ ಟೀಸರ್ ಸಂಚಲನ..!!!
ಸ್ಟಾರ್ ನಿರ್ದೇಶಕ ಮಣಿರತ್ನಂ ನಿರ್ದೇಶನದ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಮಲ್ಟಿ ಸ್ಟಾರ್ ‘ಇಂಡಿಯನ್’ ಸಿನಿಮಾ PS – 1 ಪೊನ್ನಿಯನ್ ಸೆಲ್ವನ್ (Ponniyan selvan 1)
ಸಿನಿಮಾದ ಟೀಸರ್ ರಿಲೀಸ್ ಆಗಿದೆ…
ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡ್ತಿದೆ.. ಐಶ್ವರ್ಯ , ತ್ರಿಶಾ , ಕಾರ್ತಿ , ಚಿಯಾನ್ ವಿಕ್ರಮ್ , ಫಹಾದ್ ಸೇರಿದಂತೆ ಬಹುಭಾಷೆಯ ಸ್ಟಾರ್ ನಟರ ದಂಡೇ ಈ ಸಿನಿಮಾಗೆ ಒಂದಾಗಿರೋದು ಈ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.. ಈ ಸಿನಿಮಾ ಎರೆಡು ಭಾಗಗಳಲ್ಲಿ ಬರಲಿದೆ.. 5 ಭಾಷೆಗಳಲ್ಲಿ ಬರುತ್ತಿದ್ದು , ಐದೂ ಭಾಷೆಗಳಲ್ಲೂ ಸಿನಿಮಾದ ಟೀಸರ್ ರಿಲೀಸ್ ಆಗಿ ಸೌಂಡ್ ಮಾಡ್ತಿದೆ..
ಅಂದಹಾಗೆ ಈ ಸಿನಿಮಾ ಕನ್ನಡ , ತಮಿಳು , ತೆಲುಗು ,ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗುತ್ತದೆ. ಸಿನಿಮಾಗೆ ಎ ಆರ್ ರೆಹಮಾನ್ ಅವರ ಸಂಗೀತವಿದೆ.. ಸಿನಿಮಾದಲ್ಲಿ ಚೋಳರ ಕಾಲದ ಗತ ವೈಭವವನ್ನ ಪರಿಚಯಿಸಲಾಗಿದೆ…
ಐಶ್ವರ್ಯ ರೈ , ತ್ರಿಶಾ ಮಹರಾಣಿಯರ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ವಿಶೇಷ.. ಈಗಾಗಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಿ ಟ್ರೆಂಡ್ ಆಗ್ತಿದೆ.. ಜೊತೆಗೆ ಜಯಂ ರವಿ, ಕಾರ್ತಿ, ವಿಕ್ರಮ್, ಪ್ರಕಾಶ್ ರೈ ಸೇರಿದಂತೆ ಹಲವು ಪಾತ್ರಗಳನ್ನು ಪರಿಚಯ ಮಾಡಲಾಗಿದೆ.
Vikram : ವಿಕ್ರಂಗೆ ಹೃದಯಾಘಾತವಾಗಿಲ್ಲ..!!! ಖಾಸಗಿತನ ಗೌರವಿಸಿ : ಧ್ರುವ್ ವಿಕ್ರಂ