Vikram : ವಿಕ್ರಂಗೆ ಹೃದಯಾಘಾತವಾಗಿಲ್ಲ..!!! ಖಾಸಗಿತನ ಗೌರವಿಸಿ : ಧ್ರುವ್ ವಿಕ್ರಂ
ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಸಿನಿಮಾರಂಗದವರಲ್ಲಿ ಹಾಗೂ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು..
ಆದ್ರೆ ಅವರಿಗೆ ಹೃದಯಾಘಾತವಾಗಿಲ್ಲ ಎಂಬ ವಿಚಾರವನ್ನ ಖುದ್ದು ಅವರ ಮಗ ಧ್ರುವ್ ಸ್ಪಷ್ಟಪಡಿಸಿದ್ದು ಊಹಾಪೋಹಗಳಿಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ..
ಚಿಯಾನ್ ವಿಕ್ರಮ್ ಅವರ ಆರೋಗ್ಯದಲ್ಲಿ ಏರುಪೇರುಂಟಾಗಿದ್ದೇನೋ ನಿಜವೇ.. ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.. ಆದ್ರೆ ಅವರಿಗೆ ಹೃದಯಾಘಾತವಾಗಿಲ್ಲ..
ಜುಲೈ 8 ರ ಸಂಜೆ ವೇಳೆಗೆ ವಿಕ್ರಂ ಆರೋಗ್ಯದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಚೆನ್ನೈನ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ವಿಕ್ರಂ ಆರೋಗ್ಯವಾಗಿದ್ದಾರೆ, ಅವರಿಗೆ ಎದೆ ನೋವಾಗಿದೆ ಅಷ್ಟೇ ಹೃದಯಾಘಾತವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ..
ಇದ್ರಿಂದಾಗಿ ಅಭಿಮಾನಿಗಳು ನಿರಾಳರಾಗಿದ್ದಾರೆ..
ಅಲ್ಲದೇ ಈ ಬಗ್ಗೆ ವಿಕ್ರಂ ಅವರ ಮಗ ಧ್ರುವ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಸ್ಪಷ್ಟನೆ ನೀಡಿದ್ದಾರೆ.. ಅಲ್ಲದೇ ತಮ್ಮ ಖಾಸಗಿತನಕ್ಕೆ ಅಡಚಣೆ ಉಂಟುಮಾಡದಂತೆ ಅಭಿಮಾನಿಗಳಲ್ಲಿ, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
“ಪ್ರೀತಿಯ ಅಭಿಮಾನಿಗಳೆ ಹಾಗೂ ಅಪ್ಪನಿಗೆ ಸಣ್ಣ ಮಟ್ಟಿನ ಎದೆನೋವು ಕಾಣಿಸಿಕೊಂಡಿತ್ತು, ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಕೆಲವು ಸುಳ್ಳು ಸುದ್ದಿಗಳು ಹರಿದಾಡುತ್ತಿರುವಂತೆ ಅವರಿಗೆ ಹೃದಯಾಘಾತ ಆಗಿಲ್ಲ. ಈ ರೀತಿಯ ಸುಳ್ಳು ಸುದ್ದಿಗಳು ಕೇಳಿ ನಮಗೆ ತೀವ್ರ ಬೇಸರವಾಗಿದೆ” ಎಂದಿದ್ದಾರೆ..
“ಈ ಸಮಯದಲ್ಲಿ ಅವರಿಗೆ ಹಾಗೂ ನಮ್ಮ ಕುಟುಂಬಕ್ಕೆ ಖಾಸಗಿತನದ ಅವಶ್ಯಕತೆ ಇದೆ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ. ಚಿಯಾನ್ (ವಿಕ್ರಂ) ಈಗ ಆರಾಮವಾಗಿದ್ದಾರೆ, ಅವರು ಇನ್ನೊಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ನನ್ನ ಈ ಹೇಳಿಕೆಯು ಎಲ್ಲ ಸುಳ್ಳು ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದೆ ಎಂದುಕೊಂಡಿದ್ದೇನೆ” ಎಂದಿದ್ದಾರೆ.
ಅಂದ್ಹಾಗೆ ವಿಕ್ರಮ್ ಪ್ರಸ್ತುತ ಮಣಿರತ್ಮಂ ಸಾರಥ್ಯದ ಪೊನ್ನಿಯನ್ ಸೆಲ್ವನ್ 1 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ.. ಇದರ ಹೊರತಾಗಿ ಅವರ ಅಭಿನಯದ ಕೋಬ್ರಾ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ..