777 Charlie – ಬೇಬಿ ಶಾರ್ವರಿ ಬರ್ತಡೇ ಪ್ರಯುಕ್ತ ಡಿಲಿಟೆಡ್ ಸೀನ್ ಬಿಡುಗಡೆ…!!!
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಅವಿನಾಬಾವ ಸಂಬಂಧ ಕುರಿತು 777 ಚಾರ್ಲಿ ಸಿನಿಮಾ ಈ ವರ್ಷದ ಕನ್ನಡದ ಬ್ಲಾಕ್ ಬ್ಲಸ್ಟರ್ ಸಿನಿಮಾಗಳಲ್ಲಿ ಒಂದು . 25 ದಿನಗಳನ್ನು ಪೂರೈಸಿ 50ನೇ ದಿನದತ್ತ ದಾಪುಗಾಲಿಡುತ್ತಿದೆ.
777 ಚಾರ್ಲಿ ಚಿತ್ರತಂಡ ವಿಶೇಷ ಸಂದರ್ಭದ ಪ್ರಯುಕ್ತ ಚಿತ್ರದ ಡಿಲಿಟೆಡ್ ಸಿನ್ ಅನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಚಿತ್ರದಲ್ಲಿನ ಆದ್ರಿಕಾ ಪಾತ್ರ ಮಾಡಿರುವ ಬೇಬಿ ಶಾರ್ವರಿಯ ಡಿಲಿಟೆಡ್ ದೃಶ್ಯವನ್ನು ಆಕೆಯ ಬರ್ತ್‌ಡೇ ಪ್ರಯುಕ್ತ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಕಿರಣ್ ರಾಜ್ ಹಂಚಿಕೊಂಡು ಶುಭ ಕೋರಿದ್ದಾರೆ.
https://twitter.com/i/status/1545706990412115968
777 Charlie – ಬೇಬಿ ಶಾರ್ವರಿ ಬರ್ತಡೇ ಪ್ರಯುಕ್ತ ಡಿಲಿಟೆಡ್ ಸೀನ್ ಬಿಡುಗಡೆ…
ಕಾಲೋನಿಯಲ್ಲಿ ಆದ್ರಿಕಾಳ ಬರ್ತ್‌ಡೇ ಆಯೋಜನೆಗೊಂಡಿರುತ್ತದೆ. ಎಲ್ಲರೂ ಸೇರಿ ಪುಟಾಣಿಯ ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತಿರುತ್ತಾರೆ. ಆ ವೇಳೆ ನೆಚ್ಚಿನ ನಾಯಿ ಚಾರ್ಲಿ ಮತ್ತು ಹಿಟ್ಲರ್ ಅಂಕಲ್ ಒಟ್ಟಿಗೆ ಆಗಮಿಸಿ ಆದ್ರಿಕಾಗೆ ಉಡುಗೊರೆ ನೀಡಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಈ ದೃಶ್ಯವನ್ನ ಬೇಬಿ ಶಾರ್ವರಿ ಬರ್ತಡೇ ಪ್ರಯುಕ್ತ ಹಂಚಿಕೊಂಡಿದ್ದಾರೆ.
ಜುಲೈ 29ಕ್ಕೆ OTT ಯಲ್ಲಿ 777 ಚಾರ್ಲಿ
ಜುಲೈ 29ಕ್ಕೆ ಚಿತ್ರ 50 ದಿನ ಪೂರೈಸಲಿದೆ. ಆ ವಿಶೇಷ ದಿನದಂದು ಚಿತ್ರವನ್ನು ಒಟಿಟಿಗೆ ಬಿಡುಗಡೆ ಮಾಡಲು ವೂಟ್ ಪ್ಲಾನ್ ಹಾಕಿದೆ. ವೂಟ್ ಸೆಲೆಕ್ಟ್ ಒಟಿಟಿ ಸಂಸ್ಥೆ ಚಾರ್ಲಿಯ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಒಳ್ಳೇ ಮೊತ್ತಕ್ಕೆ ಸಿನಿಮಾ ಸೇಲ್ ಆಗಿದೆ. ಇನ್ನೇನು ಇದೇ ತಿಂಗಳ 29ಕ್ಕೆ ಚಿತ್ರ ಪ್ರಸಾರ ಆರಂಭಿಸಲಿದೆ.