Biggboss kannada 9 : ಬಿಗ್ ಬಾಸ್ ಶೀಘ್ರವೇ ಶುರು : ಸುಳಿವು ಕೊಟ್ಟ ಪರಮೇಶ್ವರ್ ಗುಂಡ್ಕಲ್
ಕನ್ನಡ ಅಷ್ಟೇ ಅಲ್ದೇ ಇತರೇ ಭಾಷೆಗಳಲ್ಲೂ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್… ಕನ್ನಡದಲ್ಲಿ ಈಗಾಗಲೇ 8 ಸೀಸನ್ ಗಳು ಮುಕ್ತಾಯಗೊಂಡಿದೆ.. ಇದೀಗ ಸೀಸನ್ 9 ಯಾವಾಗ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ..
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನಲ್ಲಿ ಪ್ರತಿ ವರ್ಷ ಬದಲಾವಣೆಗಳಾಗುತ್ತಲೇ ಇರುತ್ತೆ.. ಆದ್ರೆ ಈ ವರ್ಷ ಒಂದಲ್ಲ ಬದಲಾಗಿ ಹಿಂದಿಯ ಮಾದರಿಯಲ್ಲೇ ಎರೆಡೆರೆಡು ಬಿಗ್ ಬಾಸ್ ಶೋ ಪ್ರಸಾರವಾಗಲಿದೆ ಎಂಬ ಸುದ್ದಿ ಹರಿದಾಡ್ತಿದೆ..
ಇದೆಲ್ಲದರ ನಡುವೆಯೇ ಶೀಘ್ರವೇ ಹೊಸ ಸೀಸನ್ ಶುರುವಾಗುವ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಅವರು ಸುಳಿವು ನೀಡಿದ್ದಾರೆ… ಹೀಗಾಗಿ ಬಿಗ್ ಬಾಸ್ ಫ್ಯಾನ್ಸ್ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ..
ಬಿಗ್ ಬಾಸ್ 9 ಕ್ಕೆ ಬೇಕಾದ ಮನೆ ಸೆಟ್ ಅಪ್ ಮಾಡಲಾಗುತ್ತಿದೆ ಎಂದು ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ. ಇನ್ನೂ ಆಗಸ್ಟ್ ನಲ್ಲಿ ಹೊಸ ಸೀಸನ್ ಆರಂಭವಾಗುವ ನಿರೀಕ್ಷೆಯಿದೆ. ಅಂದ್ಹಾಗೆ ತೆರೆಮರೆಯಲ್ಲಿ ಹೊಸ ಸೀಸನ್ ಗೆ ತಯಾರಿ ನಡೆಯುತ್ತಿದ್ದು ,, ಯಾವೆಲ್ಲಾ ಸ್ಪರ್ಧಿಗಳು , ನಟ, ನಟಿಯರು ಬರಲಿದ್ದಾರೆ , ಕಾಮನ್ ಮ್ಯಾನ್ ಗೆ ಅವಕಾಶವಿದ್ಯಾ ,,,??? ಸೋಷಿಯಲ್ ಮೀಡಿಯಾ ಸ್ಟಾರ್ ಗಳನ್ನೂ ಬಿಗ್ ಬಾಸ್ ಮನೆಗೆ ಕರೆತರಲಾಗುತ್ತದೆಯಾ ಎಂಬೆಲ್ಲಾ ಕುತೂಹಲಗಳು , ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ..