ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ.. ಅವರ ಅಭಿಮಾನಿಗಳು , ತಾರೆಯರು , ಗಣ್ಯರೆಲ್ಲರೂ ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ಧಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ… ಈ ಬಾರಿ ಶಿವಣ್ಣ ಬರ್ತ್ ಡೇ ಆಚರಣೆ ಮಾಡಿಕೊಳ್ತಿಲ್ಲ…
ಆದ್ರೆ ಅಭಿಮಾನಿಗಳು ಮಾತ್ರ ಶಿವಣ್ಣನ ಹುಟ್ಟುಹಬ್ಬವನ್ನ 60ನೇ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಅವರು ಹುಟ್ಟು ಹಬ್ಬ ಆಚರಿಸದೇ ಇದ್ದರೂ, ಅಭಿಮಾನಿಗಳು ಮತ್ತು ವಿವಿಧ ಸಿನಿಮಾ ತಂಡಗಳು ಸಾರ್ಥಕ ರೀತಿಯಲ್ಲಿ ಬರ್ತಡೇ ಆಚರಿಸುತ್ತಿವೆ.
ಈ ಹುಟ್ಟು ಹಬಕ್ಕಾಗಿ ಶಿವರಾಜ್ ಕುಮಾರ್ ನಟನೆಯ ಹಲವು ಸಿನಿಮಾಗಳ ಪೋಸ್ಟರ್ಸ್ ರಿಲೀಸ್ ಆಗಿವೆ. ಅಲ್ಲದೇ, ಕೆಲ ಸಿನಿಮಾಗಳ ಟೈಟಲ್ ಕೂಡ ಲಾಂಚ್ ಮಾಡಲಾಗಿದೆ. ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಶಿವರಾಜ್ ಕುಮಾರ್ ನಟನೆಯ ಚಿತ್ರಕ್ಕೆ ‘45’ ಎಂದು ಹೆಸರಿಡಲಾಗಿದ್ದು, ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರೇ ಟೈಟಲ್ ಘೋಷಣೆ ಮಾಡಿದ್ದಾರೆ. ತೆಲುಗಿನಲ್ಲಿ ಅಕ್ಕಿನೇನ ನಾಗಾರ್ಜುನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ತಮಿಳಿನಲ್ಲಿ ಶಿವಕಾರ್ತಿಕೇನ್ ಟೈಟಲ್ ಲಾಂಚ್ ಮಾಡಿದ್ದಾರೆ.
ಶ್ರೀ ನಿರ್ದೇಶನದ ಘೋಸ್ಟ್, ಯೋಗರಾಜ್ ಭಟ್ ನಿರ್ದೇಶನದ ಮತ್ತು ಪ್ರಭುದೇವ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಹೊಸ ಸಿನಿಮಾ ಹಾಗೂ ಸಚಿನ್ ಆರ್ ಅವರ ಹೊಸ ಸಿನಿಮಾದ ಪೋಸ್ಟರ್ ಗಳು ಕೂಡ ಇಂದು ಬಿಡುಗಡೆ ಆಗಿವೆ.
ಶಿವಣ್ಣ ವಾಸಿಸುವ ಮಾನ್ಯತಾ ಟೆಕ್ ಪಾರ್ಕ್ ಹಿಂದಿನ ಸರ್ಕಲ್ ಗೆ ಅಲ್ಲಿನ ನಿವಾಸಿಗಳೆಲ್ಲರೂ ಸೇರಿ ಶಿವರಾಜ್ ಕುಮಾರ್ ಸರ್ಕಲ್ ಎಂದು ಹೆಸರು ಇಟ್ಟಿದ್ದಾರೆ. ಈ ರೀತಿ ವಿಶೇಷವಾಗಿ ಶಿವಣ್ಣನಿಗೆ ಎಲ್ಲರೂ ವಿಷ್ ಮಾಡ್ತಾಯಿದ್ದಾರೆ..
ಪರ ಭಾಷಾ ನಟರ ಅಭಿಮಾನಿಗಳು ಸಹ ಶಿವಣ್ಣನಿಗೆ ವಿಷ್ ಮಾಡ್ತಾ ಇದ್ದಾರೆ.. ಜ್ಯೂನಿಯರ್ NTR ಅಭಿಮಾಣಿಗಳು ಶಿವಣ್ಣನಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನವಾಗಿ ವಿಷ್ ಮಾಡಿದ್ದಾರೆ..