ಪ್ರಶಾಂತ್ ನೀಲ್ ಗಿಂತ ಈ ಒಂದು ವಿಚಾರದಲ್ಲಿ ರಾಜಮೌಳಿ ದಿ ಬೆಸ್ಟ್…!!
ಪ್ರಶಾಂತ್ ನೀಲ್… ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರ್ ಏನು ಅಂತ ಇಡೀ ವಿಶ್ವಕ್ಕೆ ಮುಖ್ಯವಾಗಿ ಬಾಲಿವುಡ್ ಗೆ ತೋರಿಸಿಕೊಟ್ಟ ಬ್ಲಾಕ್ ಬಾಸ್ಟರ್ ಹಿಟ್ ‘KGF’ ಸಿನಿಮಾದ ಸಾರಥಿ.. ಕನ್ನಡದಲ್ಲಿ ಮಾಡಿದ್ದು ಮೂರೇ ಸಿನಿಮಾ … ಉಗ್ರಂ , KGF , KGF 2… ಮೂರೂ ಸಿನಿಮಾಗಳೂ ಸೆನ್ಷೇಷನ್ ಸೃಷ್ಟಿಸಿದ ಸಿನಿಮಾಗಳೇ..
ಹೀಗಿರುವಾಗ ಪ್ರಶಾಂತ್ ನೀಲ್ ಅವರ ಮುಂದಿನ ಕನ್ನಡದ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯಿತ್ತಾದ್ರೆ ,, ಪ್ರಶಾಂತ್ ನೀಲ್ ಅವರು ಕ್ರಮೇಣ ಟಾಲಿವುಡ್ ನಲ್ಲಿ ನೆಲೆಯೂರುತ್ತಿದ್ದಾರೆ… ಪ್ರಶಾಂತ್ ನೀಲ್ ಪ್ರಸ್ತುತ ಸಲಾರ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ… ಯಶ್ ಜೊತೆಗೆ ಸಕ್ಸಸ್ ಕಂಡಿರುವ ನೀಲ್ ಪ್ರಭಾಸ್ ಸಿನಿಮಾ ಮೂಲಕ ಸಂಚಲನ ಸೃಷ್ಟಿಸಲು ಹೊರಟಿದ್ದಾರೆ..
ಇದಾದ ನಂತರ ಜ್ಯೂ. NTR ಜೊತೆಗೆ ಸಿನಿಮಾ ಮಾಡಲಿದ್ದಾರೆ.. ಹಾಗಾದ್ರೆ ಅವರು ಕನ್ನಡ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡೋದ್ಯಾವಾಗ..?? ಅನ್ನೋ ಪ್ರಶ್ನೆ ಸಹಜವಾಗಿ ಕನ್ನಡ ಸಿನಿ ಅಭಿಮಾನಿಗಳನ್ನ ಕಾಡುತ್ತಿದೆ…
ಅಲ್ಲದೇ ಎಲ್ಲೋ ಒಂದ್ ಕಡೆ ಅಸಮಾದಾನವೂ ಮೂಡುತ್ತಿದೆ..
ಯಾಕಂದ್ರೆ ಟಾಲಿವುಡ್ ಸೆನ್ಷೇಷನಲ್ ನಿರ್ದೇಶಕ ರಾಜಮೌಳಿ ಅವರೂ ಸಹ ಸ್ಟಾರ್ ನಿರ್ದೇಶಕರೇ.. ಸೋಲಿಲ್ಲದ ಸರದಾರ.. ಅವರ ಬಾಹುಬಲಿ ಸಿನಿಮಾ ಪ್ಯಾನ್ ಇಂಡಿಯನ್ ಹಾದಿಯನ್ನ ಸುಗಮಗೊಳಿಸಿ ,,, ಪ್ರಸ್ತುತ ಸೌತ್ ಸಿನಿಮಾ ಇಂಡಸ್ಟ್ರಿಯ ದಿಕ್ಕನ್ನ ಬದಲಾಯಿಸಿದ್ದು.. ಇದಾದ ನಂತರವೇ ಬಾಲಿವುಡ್ ಮೇಲೆ ಸೌತ್ ಅಬ್ಬರ ಶುರುವಾಗಿದ್ದು.. RRR ಸಿನಿಮಾದ ಅಬ್ಬರವೂ ಎಲ್ರಿಗೂ ಗೊತ್ತೇ ಇದೆ..
ಆದ್ರೂ ಪ್ರಶಾಂತ್ ನೀಲ್ ಅವರಿಗಿಂತ ರಾಜಮೌಳಿ ಗ್ರೇಟ್ ಯಾಕೆ ಗೊತ್ತಾ..?? ರಾಜಮೌಳಿ ಅವರು ಯಾವುದೇ ಸಿನಿಮಾ ಮಾಡಲಿ ಅವರು ತೆಲುಗಿನ ಹೀರೋಗಳ ಜೊತೆಗೆ ಸಿನಿಮಾ ಮಾಡ್ತಾರೆ…
ಅಲ್ಲಿಯೇ ಇದ್ದು ತಮ್ಮ ಕೊಡುಗೆ ನೀಡ್ತಿದ್ದಾರೆ.. ಈ ವಿಚಾರದಲ್ಲಿ ರಾಜಮೌಳಿ ಪ್ರಶಾಂತ್ ನೀಲ್ ಅವರಿಗಿಂತ ದಿ ಬೆಸ್ಟ್…
ಸದ್ಯ ರಾಜಮೌಳಿ ಅವರು ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡುವತ್ತ ಗಮನ ಹರಿಸಿದ್ದಾರೆ..
ಇದನ್ನೂ ಓದಿ :