ಪ್ರಶಾಂತ್ ನೀಲ್… ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರ್ ಏನು ಅಂತ ಇಡೀ ವಿಶ್ವಕ್ಕೆ ಮುಖ್ಯವಾಗಿ ಬಾಲಿವುಡ್ ಗೆ ತೋರಿಸಿಕೊಟ್ಟ ಬ್ಲಾಕ್ ಬಾಸ್ಟರ್ ಹಿಟ್ ‘KGF’ ಸಿನಿಮಾದ ಸಾರಥಿ.. ಕನ್ನಡದಲ್ಲಿ ಮಾಡಿದ್ದು ಮೂರೇ ಸಿನಿಮಾ … ಉಗ್ರಂ , KGF , KGF 2… ಮೂರೂ ಸಿನಿಮಾಗಳೂ ಸೆನ್ಷೇಷನ್ ಸೃಷ್ಟಿಸಿದ ಸಿನಿಮಾಗಳೇ..
ಹೀಗಿರುವಾಗ ಪ್ರಶಾಂತ್ ನೀಲ್ ಅವರ ಮುಂದಿನ ಕನ್ನಡದ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯಿತ್ತಾದ್ರೆ ,, ಪ್ರಶಾಂತ್ ನೀಲ್ ಅವರು ಕ್ರಮೇಣ ಟಾಲಿವುಡ್ ನಲ್ಲಿ ನೆಲೆಯೂರುತ್ತಿದ್ದಾರೆ… ಪ್ರಶಾಂತ್ ನೀಲ್ ಪ್ರಸ್ತುತ ಸಲಾರ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ… ಯಶ್ ಜೊತೆಗೆ ಸಕ್ಸಸ್ ಕಂಡಿರುವ ನೀಲ್ ಪ್ರಭಾಸ್ ಸಿನಿಮಾ ಮೂಲಕ ಸಂಚಲನ ಸೃಷ್ಟಿಸಲು ಹೊರಟಿದ್ದಾರೆ..
ಇದಾದ ನಂತರ ಜ್ಯೂ. NTR ಜೊತೆಗೆ ಸಿನಿಮಾ ಮಾಡಲಿದ್ದಾರೆ.. ಹಾಗಾದ್ರೆ ಅವರು ಕನ್ನಡ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡೋದ್ಯಾವಾಗ..?? ಅನ್ನೋ ಪ್ರಶ್ನೆ ಸಹಜವಾಗಿ ಕನ್ನಡ ಸಿನಿ ಅಭಿಮಾನಿಗಳನ್ನ ಕಾಡುತ್ತಿದೆ…
ಇದೆಲ್ಲದರ ಹೊರತಾಗಿಯೂ ಪ್ರಶಾಂತ್ ನೀಲ್ ಅವರ ಮೇಲೆ ಇತ್ತೀಚೆಗೆ ಕನ್ನಡ ಸಿನಿಮಾ ಪ್ರಿಯರು ಮುಗಿಬಿದ್ದಿರೋದಕ್ಕೆ ಮತ್ತೊಂದು ಬಲವಾದ ಕಾರಣವಿದೆ..
KGF 2 ನಂತರ ಕನ್ನಡ ಸಿನಿಮಾ ಇಂಡಸ್ಟ್ರಿ ಜೊತೆಗೆ ಬೇರೆ ಭಾಷೆಗಳಲ್ಲೂ ಪ್ಯಾನ್ ಇಂಡಿಯನ್ ಲೆವೆಲಲ್ ನಲ್ಲಿ ಅಬ್ಬರಿಸಿದ ಸಿನಿಮಾ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾ…
ಈ ಸಿನಿಮಾಗೆ ಪರ ಭಾಷಾ ತಾರೆಯರೇ ಫಿದಾ ಆಗಿ ಹೊಗಳಿದ್ದಾರೆ..
ಹಾಗೆಯೇ ತಮಿಳಿನ ಸಿನಿಮಾ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಕೂಡ ಅದ್ಭುತ ಪ್ರದರ್ಶನವನ್ನೇ ಕಂಡಿದೆ.. ಬ ಆಕ್ಸ್ ಆಫೀಸ್ ಶೇಕ್ ಮಾಡಿದೆ… ಈ ಸಿನಿಮಾಗೂ ಅನೇಕರು ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.. ಅಂತೆಯೇ ಪ್ರಶಾಂತ್ ನೀಲ್ ಅವರೂ ಸಿನಿಮಾ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ..
ಆದ್ರೆ ಪ್ರಶಾಂತ್ ನೀಲ್ ಅವರು ವಿಕ್ರಂ ಸಿನಿಮಾಗೆ ಪ್ರತಿಕ್ರಿಯೆ ನೀಡಿದ್ದಾರೆ.. ಕನ್ನಡದ ‘ 777 ಚಾರ್ಲಿ’ ಬಗ್ಗೆ ಯಾಕೆ ಪ್ರತಿಕ್ರಿಯಿಸಿಲ್ಲ ಎಂಬುದೇ ಕನ್ನಡಾಭಿಮಾನಿಗಳು ಪ್ರಶಾಂತ್ ನೀಲ್ ಅವರಿಗೆ ಕೇಳುತ್ತಿರುವ ಪ್ರಶ್ನೆ…
ನೆಟ್ಟಿಗರು ಪ್ರಶಾಂತ್ ನೀಲ್ ಅವರಿಗೆ ‘777 ಚಾರ್ಲಿ ಸಿನಿಮಾ’ ನೋಡುವಂತೆ ಕಮೆಂಟ್ ಗಳನ್ನ ಮಾಡ್ತಿದ್ದಾರೆ..
‘ವಿಕ್ರಂ’ ಬಗ್ಗೆ ಪ್ರಶಾಂತ್ ನೀಲ್ ಅವರ ಟ್ವೀಟ್..!!
‘ಇಡೀ ವಿಕ್ರಂ ಸಿನಿಮಾ ತಂಡಕ್ಕೆ ಶುಭಾಷಯಗಳು. ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಅವರನ್ನು ಒಟ್ಟಿಗೆ ನೋಡುವುದೇ ಹಬ್ಬ. ನಿರ್ದೇಶಕ ಲೋಕೇಶ್ ಕನಕರಾಜ್ ಕೆಲಸದ ಪರಿಗೆ ಅಭಿಮಾನಿ, ಸಂಗೀತ ನಿರ್ದೇಶಕ ಅನಿರುದ್ಧ್ ನೀವು ರಾಕ್ ಸ್ಟಾರ್, ನಮ್ಮ ಮಾಸ್ಟರ್ ಅನ್ಬರಿವು ಬಗ್ಗೆ ಬಹಳ ಹೆಮ್ಮೆ ಇದೆ. ಸೂರ್ಯ ಸರ್ ರೋಲೆಕ್ಸ್ ಪಾತ್ರ ಮರೆಯಲು ಸಾಧ್ಯವಿಲ್ಲ’ ಎಂದಿದ್ದಾರೆ..
ಇದಕ್ಕೆ ಸಿಟ್ಟಾಗಿರುವ ಕನ್ನಡ ಟ್ವಿಟ್ಟರ್ ಬಳಕೆದಾರರು ವಿಕ್ರಂ ಸಿನಿಮಾ ನೋಡಿದ್ದ ತಪ್ಪಲ್ಲ,, ಆದ್ರೆ ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆದ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ನೋಡಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.