ರಣವೀರ್ ಸಿಂಗ್ , ತಮ್ಮ ತಂದೆ ಜುಗ್ಜೀತ್ ಸುಂದರ್ಸಿಂಗ್ ಭಾವನಾನಿಯ ಸಂಸ್ಥೆಯಾದ ಓಹ್ ಫೈವ್ ಓಹ್ ಮೀಡಿಯಾ ವರ್ಕ್ಸ್ LLP ಜೊತೆಗೆ SRK ನ ಮನ್ನತ್ ಹತ್ತಿರದ ಕ್ವಾಡ್ರಪ್ಲೆಕ್ಸ್ ಅನ್ನು ಖರೀದಿಸಿದ್ದಾರೆ ಎನ್ನಲಾಗ್ತಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ ಶಾರುಖ್ ಖಾನ್ ಅವರ ನೆರೆಹೊರೆಯವರಾಗಲು ಸಿದ್ಧರಾಗಿದ್ದಾರೆ.. ಮುಂಬೈನ ಬಾಂದ್ರಾದಲ್ಲಿ 119 ಕೋಟಿ ರೂಪಾಯಿ ಮೌಲ್ಯದ ಸಮುದ್ರಾಭಿಮುಖ ಐಷಾರಾಮಿ ಕ್ವಾಡ್ರಪ್ಲೆಕ್ಸ್ ಅನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಹೊಸ ಐಷಾರಾಮಿ ಕ್ವಾಡ್ರಪ್ಲೆಕ್ಸ್ ನಿರ್ಮಾಣ ಹಂತದಲ್ಲಿರುವ ಸಾಗರ್ ರೇಶಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ 16 ನೇ 17, 18 ಮತ್ತು 19 ನೇ ಮಹಡಿಗಳಲ್ಲಿ ಇದೆ ಎಂದು ವರದಿಯಾಗಿದೆ. ಈ ಆಸ್ತಿಯು 11,266 ಚದರ ಅಡಿ ವಿಸ್ತೀರ್ಣದ ಕಾರ್ಪೆಟ್ ಪ್ರದೇಶವನ್ನು ಹೊಂದಿದೆ, ಆದರೆ ಇದು 1,300 ಚದರ ಅಡಿಗಳ ವಿಶೇಷ ಟೆರೇಸ್ ಅನ್ನು ಹೊಂದಿದೆ. ಅರಬ್ಬಿ ಸಮುದ್ರದ ಅಡೆತಡೆಯಿಲ್ಲದ ನೋಟವನ್ನು ನೀಡುವ ಈ ಮನೆಯು ಮಾಲೀಕರಿಗೆ ಕಟ್ಟಡದಲ್ಲಿ 19 ಕಾರ್ ಪಾರ್ಕಿಂಗ್ ಸ್ಥಳಗಳಿಗೆ ಪ್ರವೇಶವನ್ನು ನೀಡುತ್ತದೆ.
ಐಷಾರಾಮಿ ಕ್ವಾಡ್ರಪ್ಲೆಕ್ಸ್, ಟೆರೇಸ್ ಪ್ರದೇಶವಿಲ್ಲದೆ ಪ್ರತಿ ಚದರ ಅಡಿ ದರವನ್ನು ಲೆಕ್ಕ ಹಾಕಿದರೆ, ಪ್ರತಿ ಚದರ ಅಡಿಗೆ 1.05 ಲಕ್ಷ ರೂ. ಆಗುತ್ತದೆಯಂತೆ..
ಓಹ್ ಫೈವ್ ಓಹ್ ಮೀಡಿಯಾ ವರ್ಕ್ಸ್ LLP ಜುಲೈ 8 ರಂದು ನೋಂದಾಯಿಸಲಾಗಿದೆ. ಓಹ್ ಫೈವ್ ಓಹ್ ಮೀಡಿಯಾ ವರ್ಕ್ಸ್ ಎಲ್ ಎಲ್ ಪಿ ಪರವಾಗಿ ಸಿಂಗ್ ಅವರ ತಂದೆ ಭಾವನಾನಿ ಅವರು ದಾಖಲೆಗಳಿಗೆ ಸಹಿ ಹಾಕಿದ್ದಾರೆ.
ದಾಖಲೆಗಳ ಪ್ರಕಾರ, ಕ್ವಾಡ್ರಪ್ಲೆಕ್ಸ್ಗಾಗಿ 118.94 ಕೋಟಿ ರೂ.ಗಳನ್ನು ರಣವೀರ್ ಸಿಂಗ್ ಪಾವತಿಸಿದ್ದಾರೆ ಮತ್ತು ನೋಂದಣಿಗಾಗಿ ಪಾವತಿಸಿದ ಸ್ಟ್ಯಾಂಪ್ ಡ್ಯೂಟಿ 7.13 ಕೋಟಿ ರೂ.