ಅಪ್ಪು ನಮ್ಮನ್ನೆಲ್ಲಾ ಅಗಲಿ 9 ತಿಂಗಳುಗಳೇ ಕಳೆದ್ರೂ ಅವರ ಅಗಲಿಕೆಯ ನೋವಿನಿಂದ ಅಭಿಮಾನಿಗಳು ಸಂಪೂರ್ಣವಾಗಿ ಹೊರಬಂದಿಲ್ಲ.. ಅಭಿಮಾನಿಗಳ ಹೃದಯದಲ್ಲಿ ಅಪ್ಪು ಜೀವಂತವಾಗಿದ್ದಾರೆ..
ಈ ನಡುವೆ ಅಪ್ಪು ಅಭಿಮಾನಿಗಳಿಗೆ ಟ್ವಿಟ್ಟರ್ ಸಂಸ್ಥೆ ಬೇಸರ ಮೂಡಿಸಿದೆ… ಆಕ್ರೋಶ ಮೂಡಿಸಿದೆ.. ಕಾರಣ ಇಷ್ಟೇ.. ಪುನೀತ್ ರಾಜ್ ಕುಮಾರ್ ಅವರ ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ತೆಗೆದು ಹಾಕಲಾಗಿದೆ… ಇದ್ರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ..
ಹೌದು..! ಇಷ್ಟು ದಿನ ಪುನೀತ್ ರಾಜ್ಕುಮಾರ್ ಟ್ವಿಟರ್ ಖಾತೆಯಲ್ಲಿದ್ದ ನೀಲಿ ಟಿಕ್ ಈಗ ಮಾಯವಾಗಿದೆ. ಇದ್ರಿಂದ ಅಪ್ಪು ಅಭಿಮಾನಿಗಳಿಗೆ ಇನ್ನಷ್ಟು ನೋವಾಗಿದೆ..
ಅಂದ್ಹಾಗೆ ಸೆಲೆಬ್ರೆಟಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಬ್ಲೂ ಟಿಕ್ ನೀಡಲಾಗುತ್ತದೆ.. ಇದಕ್ಕೆ ಮುಖ್ಯ ಕಾರಣ ನಕಲಿ ಅಕೌಂಟ್ ಗಳನ್ನ ಕೆಲವರು ಸೆಲೆಬ್ರಿಟಿಗಳ ಹೆಸರಲ್ಲಿ ತೆರೆಯುತ್ತಾರೆ.. ಹೀಗಾಗಿ ಸೆಲೆಬ್ರಿಟಿಗಳ ಖಾತೆಗಳಿಗೆ ಸೋಷಿಯಲ್ ಮೀಡಿಯಾ , ಅದ್ರಲ್ಲೂ ಟ್ವಿಟ್ಟರ್ ಇನ್ಸ್ಟಾದಲ್ಲಿ ಬ್ಲೂ ಟಿಕ್ ನೀಡಲಾಗುತ್ತದೆ…
ಈ ಮೂಲಕ ಇದು ಅವರ ಅಧಿಕೃತ ಖಾತೆ ಎಂದು ದೃಢೀಕರಿಸುತ್ತೆ.
ಆದ್ರೆ ಇಂತಹ ಬ್ಲೂ ಟಿಕ್ ಈಗ ಅಪ್ಪು ಖಾತೆಯಿಂದ ಗಾಯಬ್ ಆಗಿದ್ದು ಅಭಿಮಾನಿಗಳು ಕಮೆಂಟ್ ಗಳ ಮೂಲಕ ನೋವು ಹೊರಹಾಕ್ತಿದ್ದಾರೆ..
ಅಪ್ಪು ಅಗಲಿದ ಬಳಿಕ ಅವರ ಟ್ವಿಟರ್ ಅಕೌಂಟ್ ಅಧಿಕೃತ ಖಾತೆಯಾಗಿ ಉಳಿದಿಲ್ಲ. ಕಳೆದ 8 ತಿಂಗಳಿಂದ ಅವರ ಖಾತೆ ಆಕ್ಟಿವ್ ಆಗಿಲ್ಲ. ಈ ಕಾರಣಕ್ಕೆ ಪುನೀತ್ ರಾಜ್ಕುಮಾರ್ ಟ್ವಿಟರ್ ಖಾತೆಯಿಂದ ನೀಲಿ ಟಿಕ್ ಅನ್ನು ತೆಗೆದು ಹಾಕಲಾಗಿದೆ.
ಆದ್ರೆ ಅಭಿಮಾನಿಗಳು ಸುಮ್ಮನಾಗಿಲ್ಲ.. ಟ್ವಿಟ್ಟರ್ ವಿರುದ್ಧ ಸಿಡಿದೆದ್ದಿದ್ದು , ಅಪ್ಪು ಅಭಿಯಾನಕ್ಕೆ ಮುಂದಾಗಿದ್ದಾರೆ.. ಬಾಲಿವುಡ್ನ ಸಿದ್ಧಾರ್ಥ್ ಶುಕ್ಲಾ ಅವರ ಟ್ವಿಟರ್ ಖಾತೆಯಲ್ಲಿ ನೀಲಿ ಟಿಕ್ ಇದೆ ಆದರೆ, ಅಪ್ಪು ಖಾತೆಯಿಂದ ನೀಲಿ ಟಿಕ್ ತೆಗೆದಿದ್ದು ಯಾಕೆ ಎಂಬ ಪ್ರಶ್ನೆಗಳನ್ನ ಹಾಕ್ತಿದ್ದಾರೆ.. ಹೌದು ಸಿದ್ಧಾರ್ಥ್ ಶುಕ್ಲಾ ಕೂಡ ನಿಧನರಾಗಿದ್ದಾರೆ.. ಆದ್ರೆ ಅವರ ಖಾತೆಯಿಂದ ಬ್ಲೂ ಟಿಕ್ ತೆಗೆದಿಲ್ಲ.. ಈ ಪ್ರಶ್ನೆಯನ್ನ ಅಭಿಮಾನಿಗಳು ಟ್ವಿಟ್ಟರ್ ಮುಂದೆ ಇಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ.,..