ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾಗೆ ಟಾಲಿವುಡ್ ನಲ್ಲೂ ಬೇಡಿಕೆ ಕಮ್ಮಿಯಿಲ್ಲ.. ಕನ್ನಡದಿಂದ ಔಟ್ ಡೇಟೆಡ್ ಆಗಿದ್ದರೂ ಬಾಲಿವುಡ್ ನಲ್ಲಿಯೂ ಮಿಂಚುತ್ತಿದ್ದಾರೆ..
ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ಧಾರೆ.. ಕನ್ನಡ ಸಿನಿಮಾರಂಗದಿಂದ ಹಿಟ್ ಆದವರು.. ಸದ್ಯ ಕನ್ನಡ ಸಿನಿಮಾರಂಗದಿಂದ ದೂರವಿದ್ದಾರೆ..
ಅಂದ್ಹಾಗೆ ತಮಿಳಿನಲ್ಲಿ ವಿಜಯ್ ಅವರ 66 ನೇ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಅನ್ನೋದು ಎಲ್ರಿಗೂ ಗೊತ್ತಿದೆ..
ನಟಿ ರಷ್ಮಿಕಾ ಮಂದಣ್ಣ ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.
ತೆಲುಗು, ತಮಿಳು ಸಿನಿಮಾಗಳಲ್ಲಿ ಅಲ್ಲದೇ ಹಿಂದಿಯಲ್ಲೂ ಕೂಡ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಇಲ್ಲಿಯವರಗೆ ಆಕೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸಿನಿಮಾದಲ್ಲಿ ನಟಿಸಿದ್ದು, ಮಿಷನ್ ಮಜ್ನು ರಿಲೀಸ್ ಗೆ ಸಿದ್ಧವಾಗಿದೆ.
ಶೀಘ್ರದಲ್ಲಿಯೇ ಮತ್ತೊಂದು ಸಿನಿಮಾ ಗುಡ್ ಬೈ ಪ್ರೇಕ್ಷಕರ ಮುಂದೆ ಬರಲಿದೆ.
ಇದರ ನಡುವೆ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಇದು ಬಾಲಿವುಡ್ ನಲ್ಲಿ ಅವರ ಮೂರನೇ ಸಿನಿಮಾವಾಗಿದೆ..
ಆದ್ರೆ ಇದೀಗ ಮೂರೂ ಸಿನಿಮಾಗಳೂ ರಿಲೀಸ್ ಗೂ ಮೊದಲೇ ಹಿಂದಿಯ ನಾಲ್ಕನೇ ಸಿನಿಮಾದಲ್ಲಿ ರಶ್ಮಿಕಾ ನಟಿಸೋದಕ್ಕೆ ರೆಡಿಯಾಗಿದ್ದಾರೆಂದು ಹೇಳಲಾಗ್ತಿತ್ತು.. ಆದ್ರೀಗ ಆ ವದಂತಿಗೆ ಸ್ಪಷ್ಟನೆ ಸಿಕ್ಕಿದೆ… ಖುದ್ದು ರಶ್ಮಿಕಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ…
ತಾವು ಟೈಗರ್ ಶ್ರಾಫ್ ಜೊತೆಗೆ ನಟಿಸುತ್ತಿರುವುದು ನಿಜವೇ ಆದ್ರೆ ಸಿನಿಮಾದಲ್ಲಿ ಅಲ್ಲ.. ಬದಲಾಗಿ ಜಾಹಿರಾತಿನಲ್ಲಿ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ.. ಅಲ್ದೇ ಜಟೈಗರ್ ಜೊತೆಗೆ ಕೆಲಸ ಮಾಡಿದ್ದು ಉತ್ತಮ ಅನುಭವೆಂದು ಬೆಂಕಿ ಈಮೋಜಿ ಹಂಚಿಕೊಂಡಿದ್ದಾರೆ…
ಆದ್ರೆ ಇದ್ರಿಂದ ಫ್ಯಾನ್ಸ್ ಡಿಸಪಾಯಿಂಟ್ ಆಗಿದ್ದಾರೆ.. ರಶ್ಮಿಕಾ ಟೈಗರ್ ಜೋಡಿಯನ್ನ ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಬೇಕೆಂಬ ಆಸೆಯೂ ನಿರಾಸೆಯಾಗಿದೆ…