KGF ಸಿನಿಮಾ ಮೂಲಕ ಯಶ್ ಜೊತೆಗೆ ನಟಿಸಿದ ಶ್ರೀನಿಧಿ ಶೆಟ್ಟಿಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.. ಮೊದಲ ಸಿನಿಮಾದಲ್ಲೇ ಸ್ಟಾರ್ ಡಮ್ ಗಿಟ್ಟಿಸಿಕೊಂಡು ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಕನ್ನಡದ ಸ್ಟಾರ್ ನಟನ ಜೊತೆಗೆ ಮಿಂಚಿದ ಕರಾವಳಿ ಸುಂದರಿ ಶ್ರೀನಿಧಿಗೆ ಪ್ರತಿಭೆಯ ಜೊತೆಗೆ ಅದೃಷ್ಟವೂ ಸಾಥ್ ನೀಡಿದೆ..
KGF , KGF 2 ನಂತರ ಶ್ರೀನಿಧಿಗೆ ಹೆಚ್ಚೆಚ್ಚು ಆಫರ್ ಗಳು ಬರತೊಡಗಿವೆ.. ಅಂದ್ಹಾಗೆ ಪ್ರಸ್ತುತ ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅವರ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಕೋಬ್ರಾ ಸಿನಿಮಾದಲ್ಲಿ ಶ್ರೀನಿಧಿ ಬ್ಯುಸಿಯಿದ್ದಾರೆ..
ಈ ಸಿನಿಮಾಗೆ ಶ್ರೀನಿಧಿ KGF ಗಿಂತಲೂ 2 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗ್ತಿದೆ..
ಹೌದು..!
ಕೆಜಿಎಫ್ 2 ಸಿನಿಮಾಗೆ ನಟಿ 3 ಕೋಟಿ ಸಂಭಾವನೆ ಪಡೆದಿದ್ದರಂತೆ.. ಈಗ ತಮಿಳಿನ ತಮ್ಮ ಚೊಚ್ಚಲ ಚಿತ್ರ ‘ಕೋಬ್ರಾ’ಗೆ ಅವರು 6 ರಿಂದ 7 ಕೋಟಿ ಸಂಭಾವನೆ ಪಡೆದಿದ್ದಾರೆಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ..