2003 ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪಂಜಾಬಿ ಗಾಯಕ ದಲೇರ್ ಮೆಹಂದಿಗೆ ಪಟಿಯಾಲ ಕೋರ್ಟ್ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.. ಕೋರ್ಟ್ ನ ಆದೇಶದ ನಂತರ ಪೊಲೀಸರು ಗಾಯಕನನ್ನ ಬಂಧಿಸಿದ್ದಾರೆ..
2003 ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಗಾಯಕನನ್ನು ದೋಷಿ ಎಂದು ಘೋಷಿಸಲಾಗಿದೆ.. ಈ ಹಿಂದೆಯೂ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಈ ಬಾರಿಯೂ ನ್ಯಾಯಾಲಯ ಅದೇ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಆದಾಗ್ಯೂ, ಅವರು 2018 ರಲ್ಲಿ ಶಿಕ್ಷೆಯನ್ನು ಪಡೆದಾಗ, ಅವರು ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು.