ಲೇಡಿ ಸೂಪರ್ ಸ್ಟಾರ್ ನಯನತಾರಾ… ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ , ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ… ಕನ್ನಡ , ತೆಲುಗು , ತಮಿಳು , ಮಲಯಾಳಂ ನಲ್ಲಿ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡಿರುವ ಸ್ಟಾರ್ ನಟಿ..
ನಯನತಾರಾಗೆ ದೊಡ್ಡ ಸ್ಟಾರ್ ಡಮ್ ಇದೆ.. ದೊಡ್ಡ ಮಟದ ಅಭಿಮಾನಿಗಳ ಬಳಗವಿದೆ.. ಇತ್ತೀಚೆಗೆ ನಿರ್ದೇಶಕ ವಿಘ್ನೇಶ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಮದುವೆಯ ನಂತರವೂ ನಯನತಾರಾ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಶಾರುಖ್ ಖಾನ್ ಗೆ ನಾಯಕಿಯಾಗಿ ಈಗ ಬಾಲಿವುಡ್ ಗೆ ನಯನತಾರಾ ಪಾದಾರ್ಪಣೆ ಮಾಡುತ್ತಿದ್ದಾರೆ.. ಇದೀಗ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ..
ಹೌದು..! ಇಲ್ಲಿಯವರೆಗೂ 74 ಸಿನಿಮಾಗಳಲ್ಲಿ ನಟಿಸಿರುವ ನಟಿ ನಯನತಾರಾ ಅವರ 75ನೇ ಸಿನಿಮಾ ಈಗ ಘೋಷಣೆಯಾಗಿದೆ… ನಯನತಾರಾ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದು , ಸೋಷಿಯಲ್ ಮೀಡಿಯಾದಲ್ಲಿ ನಯನತಾರಾ ಹೆಚ್ಚು ಸುದ್ದಿಯಲ್ಲಿದ್ದಾರೆ..
ನೀಲೇಶ್ ಕೃಷ್ಣ ನಿರ್ದೇಶನದ ಹೊಸ ಚಿತ್ರದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರಕ್ಕೆ `ಲೇಡಿ ಸೂಪರ್ ಸ್ಟಾರ್ 75′ ಎಂದು ಹೆಸರಿಡಲಾಗಿದೆ. ಜೀ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ನಟ ಜೈ ಮತ್ತು ಹಿರಿಯ ನಟ ಸತ್ಯರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2003ರಲ್ಲಿ ಮಾಲಿವುಡ್ ನ `ಮನಸ್ಸಿನಕ್ಕರೆ’ ಚಿತ್ರದ ಮೂಲಕ ನಯನತಾರಾ ಸಿನಿಮಾರಂಗಕ್ಕೆ ಎಂಟ್ರಿ ಪಡೆದು ಆ ನಂತರದಿಂದ ಬಹುಭಾಷಾ ನಟಿಯಾಗಿ ಸೂಪರ್ ಸ್ಟಾರ್ ಗಳ ಜೊತೆಗೆ ತೆರೆಹಂಚಿಕೊಂಡರು. ಅಲ್ಲದೇ ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಾಯಕಿಯಾಗಿ ಯಶಸ್ಸು ಕಂಡು ಲೇಡಿ ಸೂಪರ್ ಸ್ಟಾರ್ ಪಟ್ಟ ಗಳಿಸಿದವರು..