ಆರ್ ಜಿವಿ…. ನಿರ್ದೇಶನದ ‘ಲಡಕಿ’ ಸಿನಿಮಾ ಐದೂ ಭಾಷೆಗಳಲ್ಲಿ ಬರುತ್ತಿದೆ.. ಕನ್ನಡದಲ್ಲಿ ಈ ಸಿನಿಮಾಗೆ ‘ಹುಡುಗಿ’ ಎಂಬ ಟೈಟಲ್ ಇಡಲಾಗಿದ್ದು , ಫೀಮೇಲ್ ಆಕ್ಷನ್ ಸಿನಿಮಾ ಇದಾಗಿದೆ… ಈ ಸಿನಿಮಾ ಮೂಲಕ ನಟಿ ಪೂಜಾ ಕನ್ನಡಕ್ಕೂ ಪಾದಾರ್ಪಣೆ ಮಾಡ್ತಾಯಿದ್ದಾರೆ.
ಜುಲೈ 15ಕ್ಕೆ ಚಿತ್ರ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ರಾಮ್ ಗೋಪಾಲ್ ಇತ್ತೀಚೆಗೆ ತಮ್ಮ ಟೀಮ್ ಜೊತೆಗೆ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರ ನಡೆಸಿದರು.
ಇದೀಗ ಪೂಜಾ ನಟಿ ಒಂದು ಬೋಲ್ಡ್ ಹೇಳಿಕೆ ನೀಡಿ ಸಂಚಲನವನ್ನ ಸೃಷ್ಟಿ ಮಾಡಿದ್ದಾರೆ.. ಹೌದು..! ಪೂಜಾ ಭಾಲೇಕರ್ ಸಿನಿಮಾದಲ್ಲೇ ಅಲ್ಲ ಪ್ರೆಸ್ ಮೀಈಟ್ ಗಳಲ್ಲೂ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ತಾಯಿದ್ದಾರೆ..
ಅಂದ್ಹಾಗೆ ಸೆನ್ಸಾರ್ ಬೋರ್ಡ್ ಈ ಸಿನಿಮಾದ ಸಾಕಷ್ಟು ಸೀನ್ಸ್ ಗಳಿಗೆ ಕತ್ತರಿ ಹಾಕಿದ್ಯಂತೆ..
ಹೌದು..! ಹಲವು ದೃಶ್ಯಗಳು ಡಿಲಿಟ್ ಆಗಿದ್ಯಂತೆ.. ಮಾತುಗಳಿಗೆ ಬೀಪ್ ಹಾಕಲಾಗಿದ್ಯಂತೆ.. ಇಷ್ಟೆಲ್ಲಾ ಆದ ನಂತರ ಸಿನಿಮಾಗೆ A ಸರ್ಟಿಫಿಕೇಟ್ ಸಿಕ್ಕಿದೆ.. ಅದ್ರಲ್ಲೂ ನಾಯಕಿಯ ಎದೆ ಸೀಳು ತೋರಿಸುವಂತಹ ಸಾಕಷ್ಟು ದೃಶ್ಯಗಳು ಈ ಸಿನಿಮಾದಲ್ಲಿ ಇದ್ದ ಕಾರಣ ಅವುಗಳಲ್ಲಿ 12 ದೃಶ್ಯಗಳನ್ನು ತಗೆಯುವಂತೆ ಮಂಡಳಿ ಸೂಚಿಸಿತ್ತು ಎಂದು ಹೇಳಲಾಗಿದೆ.