ಕಮಲ್ ಹಾಸನ್ ನಟನೆಯ ಮಲ್ಟಿವರ್ಸ್ ವಿಕ್ರಮ್ ಸಿನಿಮಾ ಇತ್ತೀಚೆಗೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.. ಸಿನಿಮಾ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ… ಸಿನಿಮಾ ಕಾಲಿವುಡ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ… ಲೋಕೇಶ್ ಕಾನಗರಾಜು ನಿರ್ದೇಶನದ ಈ ಸಿನಿಮಾ ಯಶಸ್ಸು ಕಂಡಿದೆ..
ಅಂದ್ಹಾಗೆ ಈ ಸಿನಿಮಾ ಈಗ ಹೊಸದೊಂದು ದಾಖಲೆಯನ್ನು ಬರೆದಿದೆ..
ಜೂನ್ 3ರಂದು ರಿಲೀಸ್ ಆದ ಈ ಸಿನಿಮಾ ಇದೀಗ OTTಯಲ್ಲೂ ಅಬ್ಬರಿಸುತ್ತಿದೆ…
ಜುಲೈ 8 ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ವಿಕ್ರಂ ಸಿನಿಮಾ ರಿಲೀಸ್ ಆಗಿದ್ದು, ದಾಖಲೆಯ ವಿವ್ಯೂಸ್ ಗಳ ಮೂಲಕ ಮುನ್ನುಗ್ಗುತ್ತಿದೆ.
ತೆಲುಗು, ತಮಿಳು, ಕನ್ನಡ, ಮಲಯಾಳ, ಹಿಂದಿ ಭಾಷೆಯಲ್ಲಿ ಈ ಸಿನಮಾ ರಿಲೀಸ್ ಆಗಿದ್ದು, ಎಲ್ಲಾ ಭಾಷೆಗಳಲ್ಲೂ ಬಿಗ್ಗೆಸ್ಟ್ ಓಪನಿಂಗ್ ವಿಕೆಂಡ್ ಸಾಧಿಸಿದೆ ಎಂದು ಡಿಸ್ನಿ ಹೇಳಿದೆ.
ಇಲ್ಲಿಯವರೆಗೂ ಇದ್ದ ಓಫನಿಂಗ್ ವ್ಯೂಸ್ ದಾಖಲೆಯನ್ನು ಈ ಮೂವಿ ಬ್ರೇಕ್ ಮಾಡಿದೆ. ಅಲ್ಲದೇ ಹೈಯೆಸ್ಟ್ ಸ್ರ್ಟೀಮಿಂಗ್ ನಲ್ಲೂ ಮೊದಲ ಸ್ಥಾನ ಪಡದುಕೊಂಡಿದೆ.
ಇದರ ಬಗ್ಗೆ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದು, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ವಿಕ್ರಂ ಪ್ರತಿ ಮನೆಗೆ ಸೇರಿದ್ದು ಆನಂದದ ವಿಷಯ.
ಇಷ್ಟು ದೊಡ್ಡ ಯಶಸ್ಸನ್ನು ಕೊಟ್ಟ ಪ್ರೇಕ್ಷಕರಿಗೆ ಧನ್ಯವಾದಗಳು ಎಂದಿದ್ದಾರೆ.