ಕನ್ನಡ ಅಷ್ಟೇ ಅಲ್ದೇ ಇತರೇ ಭಾಷೆಗಳಲ್ಲೂ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್… ಕನ್ನಡದಲ್ಲಿ ಈಗಾಗಲೇ 8 ಸೀಸನ್ ಗಳು ಮುಕ್ತಾಯಗೊಂಡಿದೆ..
ಇದೀಗ ಸೀಸನ್ 9 ಯಾವಾಗ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.. ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನಲ್ಲಿ ಪ್ರತಿ ವರ್ಷ ಬದಲಾವಣೆಗಳಾಗುತ್ತಲೇ ಇರುತ್ತೆ.. ಆದ್ರೆ ಈ ವರ್ಷ ಒಂದಲ್ಲ ಬದಲಾಗಿ ಹಿಂದಿಯ ಮಾದರಿಯಲ್ಲೇ ಎರೆಡೆರೆಡು ಬಿಗ್ ಬಾಸ್ ಶೋ ಪ್ರಸಾರವಾಗಲಿದೆ..
ಈ ಸುದ್ದಿ ಈ ಹಿಂದೆ ವದಂತಿಯಷ್ಟೇ ಆಗಿತ್ತು.. ಆದ್ರೀಗ ಅಧಿಕೃತವಾಗಿದೆ..ಹೌದು..! ಒಟಿಟಿ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ Voot ನಲ್ಲಿ ಡಿಜಿಟಲ್ ಆವೃತ್ತಿಯು ಪ್ರಸಾರವಾಗಲಿದೆ.
ಇನ್ನೂ ಹಾರ್ಟ್ ಆಫ್ ದ ಬಿಗ್ ಬಾಸ್ ಬಗ್ಗೆ ಮಾತಾನಡಿರುವ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ 8 ಆವೃತ್ತಿಗಳ ನಿರೂಪಕರಾಗಿ, ‘ಬಿಗ್ ಬಾಸ್ ಕನ್ನಡ’ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಈ ವರ್ಷ, ಮೊದಲ ಒಟಿಟಿ ಆವೃತ್ತಿಯೊಂದಿಗೆ ಮನರಂಜನೆಗೆ ಹೊಸ ತಿರುವನ್ನು ತರಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.ಬಿಗ್ ಬಾಸ್ ಕನ್ನಡ ಹಿಂದಿನ ವರ್ಷಗಳಲ್ಲಿ ಉತ್ತಮ ಜನಪ್ರಿಯತೆ ಗಳಿಸಿದೆ. ಆಗಸ್ಟ್ನಿಂದ Vootನಲ್ಲಿ ಸ್ಟ್ರೀಮಿಂಗ್ ಪ್ರಾರಂಭವಾಗುತ್ತದೆ.