Pratap Poten : ಖ್ಯಾತ ಬಹುಭಾಷಾ ನಟ ,ನಿರ್ದೇಶಕ ಪ್ರತಾಪ್ ಪೋತೆನ್ ನಿಧನ
ಬಹುಭಾಷೆಗಳಲ್ಲಿ ನಟಿಸಿರುವ ಮಾಲಿವುಡ್ ನ ನಟ ಪ್ರತಾಪ್ ಪೋತೇನ್ ಅವರು ವಿಧಿವಶರಾಗಿದ್ದಾರೆ.. ಇವರು ಸಿನಿಮಾರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದರು.. ನಿರ್ದೇಶಕ , ನಟ , ಬರಹಗಾರರಾಗಿ ಗುರುತಿಸಿಕೊಂಡಿದ್ದರು..
69 ನೇ ವಯಸ್ಸಿನಲ್ಲಿ ನಟ ಇಹಲೋಕ ತ್ಯಜಿಸಸಿದ್ದು ಸಿನಿಮಾರಂಗದವರು ಕಂಬನಿ ಮಿಡಿಯುತ್ತಿದ್ದಾರೆ..
ತಮ್ಮ ನಿವಾಸದಲ್ಲಿ ಅವರು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಪ್ರತಾಪ್ ಪೋತೆನ್ ನಿಧನಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
1978 ರಲ್ಲಿ ಆರವಮ್ ಹೆಸರಿನ ಸಿನಿಮಾ ಮೂಲಕ ಇಂಡಸ್ಟ್ರಿಗೆ ಇವರು ಪಾದಾರ್ಪಣೆ ಮಾಡಿದ್ದರು. ಮಲಯಾಳಂ ಮಾತ್ರವೇ ಅಲ್ಲದೆ, ತಮಿಳು, ತೆಲುಗು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.
ನಾಯಕ ನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ, ಖಳನಾಟನಾಗಿಯು ನಟಿಸಿದ್ದಾರೆ..
ಪ್ರತಾಪ್ 1985 ರಲ್ಲಿ ಖ್ಯಾತ ನಟಿ ರಾಧಿಕಾರನ್ನು ವಿವಾಹವಾದರು, ಆದರೆ ಒಂದೇ ವರ್ಷದಲ್ಲಿ ವಿಚ್ಛೇಧನ ಪಡೆದುಕೊಂಡರು. ಬಳಿಕ ರಾಧಿಕಾ, ನಟ ಶರತ್ ಕುಮಾರ್ ಅನ್ನು ವಿವಾಹವಾದರು. ಪ್ರತಾಪ್ ಪೋತೆನ್ ಉದ್ಯಮಿಯಾಗಿದ್ದ ಅಮಲ್ಯ ಸತ್ಯನಾಥನ್ ಅವರನ್ನು 1990 ರಲ್ಲಿ ವಿವಾಹವಾದರು. ಅವರಿಗೆ ಒಬ್ಬ ಮಗಳಿದ್ದಾಳೆ. ಅಮಲ್ಯ ಹಾಗೂ ಪ್ರತಾಪ್ 22 ವರ್ಷಗಳ ಕಾಲ ಜೊತೆಗೆ ಸಂಸಾರ ನಡೆಸಿ ಬಳಿಕ ವಿಚ್ಛೇಧನ ಪಡೆದು ದೂರಾದರು.