ಸ್ಯಾಂಡಲ್ ವುಡ್ Sandalwood ಸಿನಿಮಾ ಮೂಲಕ ಹಿಟ್ ಆಗಿ ಟಾಲಿವುಡ್ ನಲ್ಲೇ ಬೇರು ಬಿಟ್ಟು , ಬಾಲಿವುಡ್ ನಲ್ಲಿ ಸ್ಟ್ರಗಲ್ ಮಾಡ್ತಿರೋ ರಶ್ಮಿಕಾ ಮಂದಣ್ಣ Rashmika Mandanna ಈಗಾಗಲೇ ಬಾಲಿವುಡ್ ನ 2 ಸಿನಿಮಾಗಳಲ್ಲಿ ನಟಿಸಿ ಆಗಿದೆ.. ಈಗ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಜೊತೆಗೆ ಪುಷ್ಪ 2 , ತಮಿಳಿನಲ್ಲಿ ವಿಜಯ್ ಸಿನಿಮಾದಲ್ಲೂ ಬ್ಯುಸಿಯಿದ್ದಾರೆ..
ಸಿನಿಮಾಗಳಿಗಿಂತ ಟ್ರೋಲ್ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರೋ ರಶ್ಮಿಕಾ ಲವ್ ಲೈಫ್ ವಿಚಾರವಾಗೂ ಗಾಸಿಪ್ ಆಗ್ತಲೇ ಇರುರತ್ತಾರೆ.. ಅದ್ರಲ್ಲೂ ಗೀತಾ ಗೋವಿಂದಂ ಕೋ ಸ್ಟಾರ್ ವಿಜಯ್ ದೇವರಕೊಂಡ ಅವರ ಜೊತೆಗೆ ಲವ್ವಲ್ಲಿದ್ದಾರೆ ಎಂಬ ಸುದ್ದಿ ಆಗಾಗ ಹರಿದಾಡ್ತಲೇ ಇರುತ್ತೆ.. ಗಾಸಿಪ್ ಗೆ ಪುಷ್ಠಿ ಎಂಬಂತೆ ಇಬ್ಬರೂ ಒಟ್ಟಾಗಿ ಹೋಟೆಲ್ , ಜಿಮ್ ಹೊರಗೆ ಹೀಗೆ ಅಲ್ಲಲ್ಲಿ ಒಟ್ಟಿಗೆ ಕಾಣಿಸಿಕೊಳ್ತಾ ಇರುತ್ತಾರೆ..
ಆದ್ರೆ ಇತ್ತೀಚೆಗೆ ರಶ್ಮಿಕಾ ವಿಜಯ್ ದೇರಕೊಂಡ ಮೇಲೆ ಮುನಿಸಿಕೊಂಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ… ಇನ್ನೂವರೆಗೂ ಇಬ್ಬರ ನಡುವಿನ ಮುನಿಸು ಹಾಗೆ ಇದೆ ಎನ್ನಲಾಗ್ತಿದ್ದು , ಇದೀಗ ಸಾರಾ ಅಲಿ ಖಾನ್ ಜೊತೆಗೆ ದೇವರಕೊಂಡ ಡೇಟಿಂಗ್ ಸುದ್ದಿ ಸಂಚಲನ ಸೃಷ್ಟಿಸಿದೆ.. ಈ ಹೊತತ್ತಲ್ಲೇ ಮತ್ತೊಮ್ಮೆ ರಶ್ಮಿಕಾ ಮಂದಣ್ಣ ಟ್ರೋಲಿಗರ ಪಾಲಿಗೆ ಆಹಾರ ಆಗಿದ್ದಾರೆ,…
ಇದೆಲ್ಲದರ ನಡುವೆ ಸಾರಾ ಅಲಿ ಖಾನ್ ಬ್ಲಾಸ್ಟಿಂಗ್ ವಿಚಾರ ಒಂದನ್ನ ಹೇಳಿದ್ದಾರೆ.. ಕಾಫಿ ವಿತ್ ಕರಣ್ ಶೋನಲ್ಲಿ ಜಾಹ್ನವಿ ಮತ್ತು ಸಾರಾ ಅಲಿಖಾನ್ ಭಾಗಿಯಾಗಿದ್ದರು.
ಜಾಹ್ನವಿಗೆ ರಾಪಿಡ್ ರೌಂಡ್ ನಲ್ಲಿ ರಶ್ಮಿಕಾ ಮಂದಣ್ಣ ಅವರ ಇನ್ಸ್ಟಾ ದಲ್ಲಿ ಫಾಲೋವರ್ ಹೆಚ್ಚಾದ ಕುರಿತು ಪ್ರಶ್ನೆ ಕೇಳಲಾಗಿತ್ತು. ರಶ್ಮಿಕಾ ಮಂದಣ್ಣ ಬಗ್ಗೆ ಜಾಹ್ನವಿ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಾರಾ, ಈ ಇಬ್ಬರ ಡೇಟಿಂಗ್ ವಿಚಾರವನ್ನು ಮಾತನಾಡಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ..