Sushmitha Sen : Lalith Modi
ಕೆಲ ದಿನಗಳ ಹಿಂದೆ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಬ್ರೇಕ್ ಅಪ್ ವಿಚಾರವಾಗಿ ಸುದ್ದಿಯಲ್ಲಿದ್ದ ಮಾಜಿ ವಿಶ್ವ ಸುಂದರಿ , ನಟಿ ಸುಷ್ಮಿತಾ ಸೇನ್ ಈಗ ಮತ್ತೆ ಡೇಟಿಂಗ್ ವಿಚಾರವಾಗಿಯೇ ಸುದ್ದಿಯಲ್ಲಿದ್ದಾರೆ..
ಹೌದು..!! ಮಾಜಿ ವಿಶ್ವಸುಂದರಿ, ನಟಿ ಸುಷ್ಮಿತಾ ಸೇನ್ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಮಾಜಿ ಐಪಿಎಲ್ ಚೈರ್ಮನ್ ಲಲಿತ್ ಮೋದಿ ಜೊತೆ ಡೇಟಿಂಗ್ ನಲ್ಲಿದ್ದಾರೆ.
ಈ ವಿಷಯವನ್ನ ಸೋಶಿಯಲ್ ಮೀಡಿಯಾ ಮೂಲಕ ಲಲಿತ್ ಮೋದಿ ತಿಳಿಸಿದ್ದಾರೆ.
ಸುಷ್ಮಿತಾ ಸೇನ್ ತನ್ನ ಸಂಗಾತಿಯಾಗಿ ಪರಿಚಯ ಮಾಡುತ್ತಾ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಾಲ್ಡೀವ್ಸ್ ಬೀಜ್ ಗಳಲ್ಲಿ ಸುತ್ತಾಡಿ ಈಗ ಲಂಡನ್ ನಲ್ಲಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡುತ್ತಿದ್ದೇನೆ.
ನನ್ನ ಜೀವನದ ಸಂಗಾತಿ ಸುಷ್ಮಿತಾ ಸೇನ್ ಜೊತೆ ಜೀವನ ಆರಂಭಿಸುತ್ತಿರೋದು ತುಂಬಾ ಖುಷಿಕೊಡುತ್ತಿದೆ ಎಂದು ಮೋದಿ ಬರೆದುಕೊಂಡಿದ್ದಾರೆ.
ಇದನ್ನ ನೋಡಿ ನೆಟ್ಟಿಗರು ಈ ಇಬ್ಬರೂ ಮೆದುವೆ ಮಾಡಿಕೊಂಡಿದ್ದಾರೆ ಎಂದು ಭಾವಿಸಿ ಶುಭಾಶಯಗಳನ್ನು ತಿಳಿಸಿದ್ದರು.
ಆದ್ರೆ ಇದಕ್ಕೆ ಸ್ಪಷ್ಟನೆ ನೀಡಿರುವ ಮೋದಿ, ಪ್ರಸ್ತುತ ನಾವು ಡೇಟಿಂಗ್ ನಲ್ಲಿದ್ದೇವೆ.
ಒಂದು ದಿನದಲ್ಲಿಯೇ ನಾವು ಪ್ರೀತಿಯಲ್ಲಿ ಬಿದ್ದಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಸುಷ್ಮಿತಾ ಸೇನ್ ಈ ಮೊದಲು ಪಾಕ್ ಕ್ರಿಕೆಟರ್ ವಸೀಂ ಅಕ್ರಮ್ ಅವರೊಂದಿಗೆ ಪ್ರೀತಿಯಲ್ಲಿದ್ದರು.
ಇವರಿಬ್ಬರು ಲೀವಿಂಗ್ ರಿಲೇಷನ್ ಶಿಪ್ ನಲ್ಲೂ ಕೂಡ ಇದ್ದರು. ಆದ್ರೆ ಸುಷ್ಮಿತಾ ಬಿಸಿ ಶೆಡ್ಯೂಲ್ ಕಾರಣ ವಸೀಂ ಬೇಸರಗೊಂಡು ಅವರಿಂದ ದೂರವಾದರು.
ಕೆಲವು ವರ್ಷಗಳ ನಂತರ.. ಸುಷ್ಮಿತಾ ಸೇನ್ ಖ್ಯಾತ ಮಾಡೆಲ್ ರೋಹ್ಮನ್ ಅವರನ್ನು ಪ್ರೀತಿಸುತ್ತಿದ್ದರು.
ಆದರೆ ಅದೂ ಮೂರು ವರ್ಷಗಳ ಸಂಬಂಧವಾಗಿಯೇ ಉಳಿಯಿತು. ಇದೀಗ ಲಲಿತ್ ಮೋದಿ ಜೊತೆ ಕಾಣಿಸಿಕೊಂಡಿದ್ದಾರೆ.