ನಯನತಾರಾ ವಿಘ್ನೇಶ್ ಶಿವನ್ ಮದುವೆ ವೀಡಿಯೋ OTT ಲಿ ಬರಲ್ಲ. ಯಾಕೆ ಗೊತ್ತಾ ?
ಲೇಡಿ ಸೂಪರ್ ಸ್ಟಾರ್ ನಯನತಾರಾ ತಮ್ಮ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ವರಿಸಿದ್ದು ನಿಮಗೆ ಗೊತ್ತೇ ಇದೆ. ಜೂನ್ 9 ರಂದು ಮಹಾಬಲಿಪುರಂನ ಜನಪ್ರಿಯ ರೆಸಾರ್ಟ್ನಲ್ಲಿ ಮದುವೆ ಅದ್ದೂರಿಯಾಗಿ ನಡೆಯಿತು. ಈ ಮದುವೆಯ ದೃಶ್ಯಗಳನ್ನ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದಕ್ಕಾಗಿ 25 ಕೋಟಿ ಒಪ್ಪಂದವಾಗಿ ಎಂದು ವರದಿಯಾಗಿತ್ತು. ಇದೀಗ ಇದೀಗ ಡೀಲ್ ರದ್ದಾಗಿದೆ ಎಂಬ ಸುದ್ದಿಉ ಹರಿದಾಡುತ್ತಿದೆ.
ನೆಟ್ಫ್ಲಿಕ್ಸ್ ಮಹಾಬಲಿಪುರಂನಲ್ಲಿರುವ ಪಂಚತಾರಾ ಹೋಟೆಲ್ನಲ್ಲಿ ನಯನತಾರ ಮದುವೆಗೆ ಬಂದ ಅತಿಥಿಗಳಿಗಾಗಿ ಎಲ್ಲಾ ಕೊಠಡಿಗಳನ್ನು ಬುಕ್ ಮಾಡಿತ್ತು. ಸಮಾರಂಭಕ್ಕಾಗಿ ಗಾಜಿನ ಅರಮನೆಯನ್ನೂ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಒಂದು ಪ್ಲೇಟ್ ಊಟಕ್ಕೆ 3500 ರೂ. ಮುಂಬೈನ ದುಬಾರಿ ಮೇಕಪ್ ಕಲಾವಿದರು ಮತ್ತು ಭದ್ರತಾ ಸಿಬ್ಬಂದಿಗಳು ಹೆಚ್ಚು ಖರ್ಚು ಮಾಡಲಾಗಿತ್ತು. ಸ್ಟೈಲಿಶ್ ನಿರ್ದೇಶಕ ಗೌತಮ್ ಮೆನನ್ ಈ ಮದುವೆಯನ್ನು ನಿರ್ದೇಶಿಸಿದ್ದಾರೆ ಎಂದು ವರದಿಯಾಗಿದೆ.
ಈ ಮದುವೆ ಶೀಘ್ರದಲ್ಲೇ ಡಿಜಿಟಲ್ ವೇದಿಕೆಯಲ್ಲಿ ಸ್ಟ್ರೀಮ್ ಆಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ನಯನತಾರಾ ಅಭಿಮಾನಿಗಳು ಮದುವೆ ವೀಡಿಯೋಗಾಗಿ ಕಾದು ಕುಳಿತಿದ್ದರು ಆದರೆ, ನೆಟ್ಫ್ಲಿಕ್ಸ್ ಅವರ ಭರವಸೆಯನ್ನು ಸುಳ್ಳಾಗಿಸಿದೆ. ಒಟಿಟಿ ಪ್ಲಾಟ್ಫಾರ್ಮ್ ನಯನತಾರಾ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿದೆಯಂತೆ. ವಿಘ್ನೇಶ್ ಶಿವನ್ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣಕ್ಕಾಗಿ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಮದುವೆಯಾದ ಒಂದು ತಿಂಗಳ ನಂತರ, ವಿಘ್ನೇಶ್ ಶಿವನ್ ಕೆಲವು ಚಿತ್ರಗಳನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೆಲೆಬ್ರಿಟಿಗಳಾದ ಶಾರುಖ್ ಖಾನ್, ರಜನಿಕಾಂತ್, ಮಣಿರತ್ನಂ ಮತ್ತು ಅಟ್ಲಿ ಅವರೊಂದಿಗೆ ತೆಗೆದ ಫೋಟೋಗಳನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನೆಟ್ಫ್ಲಿಕ್ಸ್ ಇದರ ಬಗ್ಗೆ ಅತೃಪ್ತಿ ಹೊಂದಿದೆ ಎನ್ನಲಾಗಿದೆ. ಹಾಗಾಗಿ ಈ ಡೀಲ್ ರದ್ದಾಗಿದೆ ಎಂದು ಕಾಲಿವುಡ್ ಮಾಧ್ಯಮಗಳಲ್ಲಿ ಗುಸುಗುಸು ಕೇಳಿಬರುತ್ತಿದೆ.