ಬಹುಭಾಷಾ ನಟಿ ಇಲಿಯಾನಾ ಡಿಕ್ರೂಸ್ ( Ileana D’Cruz) ಅವರು ಸಿನಿಮಾಗಳಿಗಿಂತ ಹೆಚ್ಚಾಗಿ ಖಾಸಗಿ ಜೀವನದಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ.. ಕೆಲ ದಿನಗಳ ಹಿಂದೆ ಬ್ರೇಕ್ ಅಪ್ ವಿಚಾರವಾಗಿ ಸುದ್ದಿಯಲ್ಲಿದ್ದ ನಟಿ ಈಗ ಮತ್ತೊಂದು ಹೊಸ ಲವ್ ಸ್ಟೋರಿ ವಿಚಾರವಾಗಿ ಚರ್ಚೆಯಲ್ಲಿದ್ದಾರೆ..
ಅಂದ್ಹಾಗೆ ಬಾಲಿವುಡ್ ನ ಸ್ಟಾರ್ ನಟಿ ಕತ್ರಿನಾ ಕೈಫ್ ಸಹೋದರನ ಜೊತೆಗೆ ಇಲಿಯಾನಾ ಡೇಟಿಂಗ್ ಗಾಸಿಪ್ ಸೌಂಡ್ ಮಾಡ್ತಿದೆ.. ಇದಕ್ಕೆ ಪುಷ್ಠಿ ನೀಡುವಂತೆ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ…
ಕತ್ರಿನಾ ಇತ್ತೀಚಿಗಷ್ಟೆ 39ನೇ ವರ್ಷದ ಹುಟ್ಟುಹಬ್ಬವನ್ನ ತಮ್ಮ ಪತಿ ವಿಕ್ಕಿ ಕೌಶಾಲ್ ಹಾಗೂ ಆಪ್ತರ ಜೊತೆಗೆ ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಂಡರು. ಈ ಟ್ರಿಪ್ ಫೋಟೋಗಳಲ್ಲಿ ಇಲಿಯಾನಾ ಕೂಡ ಕಾಣಿಸಿಕೊಂಡಿದ್ದಾರೆ.. ಇದೇ ಅಚ್ಚರಿ ಮೂಡಿಸಿರೋದು..
ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿನ್ ಜೊತೆ ಇಲಿಯಾನಾ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗ್ತಿದೆ..
ಅಂದ್ಹಾಗೆ ಇಲಿಯಾನಾ ಕೊನೆಯದಾಗಿ ಬಿಗ್ ಬುಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.. ಇತ್ತ ಕತ್ರೀನಾ ವಿಕ್ಕಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ…