Madhavan’s son vedanth won gold in national swimming compitation
ಬಹುಭಾಷ ನಟ ಮಾಧವನ್ ಪುತ್ರ ವೇದಾಂತ್ ಮತ್ತೊಮ್ಮೆ ಈಜಿನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ರಾಷ್ಟ್ರಮಟ್ಟದ ಈಜು ಸ್ಪರ್ಧೆ 48ನೇ ಜೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 1500ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಬೇಟೆಯಾಡಿದ್ದಾರೆ.
ಎಂದಿಗೂ ಅಸಾಧ್ಯವೆನ್ನಬೇಡ. “ನೀನು 1500 ಮೀಟರ್‌ಗಳ ರಾಷ್ಟ್ರೀಯ ಜೂನಿಯರ್ ದಾಖಲೆಯನ್ನು ಮುರಿದಿದ್ದೀಯ” ಎಂದು ಶೀರ್ಷಿಕೆ ನೀಡಿ ವೇದಾಂತ್ ಈಜುತ್ತಿರುವ ವೀಡಿಯೋವನ್ನ ನಟ ಮಾಧವನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಅದ್ವೈತ್ 16 ನಿಮಿಷಗಳಲ್ಲಿ 780 ಮೀಟರ್ ಈಜಿ ದಾಖಲೆಯನ್ನು ಮುರಿದಿದ್ದಾರೆ.
ವೇದಾಂತ್ ಈ ಹಿಂದೆಯೂ ಹಲವಾರು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಬಾಚಿಕೊಂಡಿದ್ದಾರೆ.
https://twitter.com/i/status/1548656807631278080