ಅಪ್ರಾಪ್ತೆಯರಿಗೆ ಮರ್ಮಾಂಗ ತೋರಿಸಿ ಅಶ್ಲೀಲತೆ ಪ್ರದರ್ಶಿಸಿದ್ದ ಮಲಯಾಳಂ ನಟ ಶ್ರೀಜಿತ್ ರವಿಗೆ ಜಾಮೀನು ಮಂಜೂರಾಗಿದೆ.. ಈತನನ್ನ ಕೆಲ ದಿನಗಳ ಹಿಂದಷ್ಟೇ ಕೇರಳ ಪೊಲೀಸರು ಬಂಧಿಸದ್ದರು..
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 11ರ ಅಡಿ ಈತನನ್ನ ಬಂಧಿಸಲಾಗಿತ್ತು. ಜುಲೈ 4ರಂದು ತ್ರಿಶೂರ್ ಜಿಲ್ಲೆಯ ಅಯ್ಯಂತೊಳೆ ಎಸ್ ಎನ್ ಪಾರ್ಕ್ನಲ್ಲಿ ಈ ಘಟನೆ ನಡೆದಿತ್ತು. ಪಾರ್ಕ್ ಬಳಿ ಶ್ರೀಜಿತ್ ರವಿ ತನ್ನ ಕಾರಿನಲ್ಲಿ ಕುಳಿತಿದ್ದ ವೇಳೆ ಅಲ್ಲದೇ ಸಮೀಪಿಸುತ್ತಿದ್ದ ಅಪ್ರಾಪ್ತ ಬಾಲಕಿಯರಿಗೆ ಕಾರಿನಿಂದ ಇಳಿದು ತನ್ನ ದೇಹದ ಖಾಸಗಿ ಭಾಗವನ್ನು ಪ್ರದರ್ಶನ ಮಾಡಿದ್ದ. ಈ ಹಿನ್ನೆಲೆ ಆತನನ್ನ ತ್ರಿಶೂರ್ ಪೋಲಿಸರು ಬಂಧಿಸಿದ್ದರು.
ಇದೀಗ ಕೇರಳ ಹೈ ಕೋರ್ಟ್ ಶ್ರೀಜಿತ್ ರವಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.. ಅಲ್ಲದೇ ಆತನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಅನುಮಾನದ ಮೇಲೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಹೈ ಕೋರ್ಟ್ ತಾಕೀತು ಮಾಡಿದೆ.
ಶ್ರೀಜಿತ್ ಪರ ವಕೀಲರು ನ್ಯಾಯಾಲಯದಲ್ಲಿ ಶ್ರೀಜಿತ್ ಪರವಾದ ಮಂಡಿಸಿದ್ದರು. ಕಳೆದ 6 ವರ್ಷಗಳಿಂದ ಶ್ರೀಜಿತ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ನಡೆದ ಘಟನೆಯಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಅವರ ಮಾನಸಿಕ ಆರೋಗ್ಯವನ್ನು ಪರಿಗಣಿಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅಲ್ಲದೇ ಮತ್ತೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಹೇಳಿದೆ. ಜೊತೆಗೆ ಶ್ರೀಜಿತ್ ರವಿ ತಂದೆ ಮತ್ತು ಪತ್ನಿಗೆ ಅಫಿಡವಿಟ್ ಸಲ್ಲಿಸುವಂತೆ ಹೇಳಿದೆ. ಒಂದು ವೇಳೆ ಇಂತಹ ಘಟನೆ ಮರುಕಳಿಸಿದರೆ ಜಾಮೀನು ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ..