ದೇಶದಲ್ಲಿ ಮತ್ತೊಮ್ಮೆ ಕೋವಿಡ್ ಆತಂಕ ಹೆಚ್ಚಾಗ್ತಿದೆ.. ಇದ್ರಿಂದ ಜನರಿಗೆ ಮತ್ತೆ ಭೀತಿ ಎದುರಾಗಿದೆ.. ಚಿತ್ರರಂಗಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ..
ಕನ್ನಡ , ತಮಿಳು , ತೆಲುಗು ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ.. ಅನೇಕ ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ.. ಹೀಗಿರೋವಾಗಲೇ ತೆಲುಗು ಸಿನಿಮಾಗಳ ಶೂಟಿಂಗ್ ಸ್ಥಗಿತಗೊಳಿಸುವುದಕ್ಕೆ ಚಿಂತನೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ..
ಹೌದು..! ಕೋವಿಡ್ 19 ನಿಂದಾಗಿ ಚಿತ್ರಮಂದಿರಗಳ ಆದಾಯ ಸಂಪೂರ್ಣವಾಗಿ ಕುಸಿದಿದೆ.. ಮತ್ತೊಂದೆಡೆ ಸಿನಿಮಾದ ಪ್ರೊಡಕ್ಷನ್ ಖರ್ಚು ಹೆಚ್ಚಾಗಿದೆ.. ಇದನ್ನ ಪರಿಗಣಿಸಿ ತೆಲುಗು ಸಿನಿಮಾ ನಿರ್ಮಾಕರು ಇಂತಹದೊಂದು ಆಲೋಚನೆಯಲ್ಲಿ ತೊಡಗಿದ್ದಾರಂತೆ..,
ಹೀಗಾಗಿ ಆಗಸ್ಟ್ 1 ರಿಂದ ಎಲ್ಲಾ ಸಿನಿಮಾಗಳ ಚಿತ್ರೀಕರಣ ಸ್ಥಗಿತಗೊಳಿಸುವ ಕುರಿತಾಗಿ ಆಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ..
ಕಳೆದ ಕೆಲ ದಿನಗಳಿಂದ ತೆಲುಗು ನಿರ್ಮಾಕರು ಸೇರಿ ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ.. ಅಲ್ಲದೇ ಉದ್ಯಮ ಉಳಿವಿಗೆ ನೆರವಾಗುವ ವಿಚಾರಗಳನ್ನ ಅಳವಡಿಸಿಕೊಳ್ಳುವ ಬಗ್ಗೆ ಕಠಿಣ ಕ್ರಮಗಳನ್ನ ಕೈಗೊಳ್ಳುವ ಬಗ್ಗೆ ಮಾತುಕತೆಯನ್ನ ನಡೆಸಿ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ..
ಅಲ್ಲದೇ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆದ 10 ವಾರಗಳ ವರೆಗೂ ಸಿನಿಮಾವನ್ನ ಒಟಿಟಿಗೂ ರಿಲೀಸ್ ಮಾಡದೇ ಇರಲು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದೂ ಕೂಡ ಹೇಳಲಾಗ್ತಿದೆ..
ಜೊತೆಗೆ ಸಂಭಾವನೆ ಕಡಿತಗೊಳಿಸಿಕೊಳ್ಳುವಂತೆ ನಟ , ನಿರ್ದೇಶಕರ ಮನವೊಲಿಸುವಿಕೆಗೂ ಪ್ರಯತ್ನ ಮಾಡುವ ಕುರಿತು ಚರ್ಚೆಯಾಗಿದೆ ಎನ್ನಲಾಗ್ತಿದೆ..
ಇಂತಹ ಸಮಸ್ಯಗಳು ಬಗೆಹರಿಯುವವರೆಗೂ ಸಿನಿಮಾಗಳ ಶೂಟಿಂಗ್ ಸ್ಥಗಿತಗೊಳಿಸುವುದಕ್ಕೆ ನಿರ್ಮಾಕರ ಟೀಮ್ ನಿರ್ಧರಿಸಿದ್ದಾರೆ ಎನ್ನಲಾಗಿದೆ..