Yash – Radhika : ಸಿನಿರಂಗದಲ್ಲಿ ಯಶ್ – ರಾಧಿಕಾ ಜರ್ನಿಗೆ 14 ವರ್ಷ…!!!
ಇಂದು ಭಾರತದಾದ್ಯಂತ ರಾಕಿ ಭಾಯ್ ಆಗಿಯೇ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿರುವ ಯಶ್ KGF 2 ಮೂಲಕ ಇಂಡಿಯನ್ ಸ್ಟಾರ್ ಆಗಿದ್ದಾರೆ.. ಲವರ್ ಬಾಯ್ ಆಗಿ ಡಿಫರೆಂಟ್ ಮ್ಯಾರಿಸಮ್ , ಡೈಲಾಗ್ಸ್ , ಆಟಿಟ್ಯೂಡ್ ನಿಂದಲೇ ಗುರಿತಿಸಿಕೊಂಡು ಅಭಿಮಾನಿಗಳ ಅಣ್ತಮ್ಮನಾಗಿ , ಕಿರಾತಕನಾಗಿ ಜನರಿಗೆ ಇಷ್ಟವಾಗಿ ರಾಜಾಹುಲಿಯಾಗಿ ಅಬ್ಬರಿಸಿ , ರಾಮಾಚಾರಿಯಾಗಿ ಮೆರೆದ ಯಶ್ ರಾಕಿ ಭಾಯ್ ಆಗಿ ಹವಾ ಸೃಷ್ಟಿಸಿದ್ಧಾರೆ.,.
ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಯಾದ ಗಜಕೇಸರಿ , ರಾಜಧಾನಿಯಲ್ಲಿ ಭರ್ಜರಿಯಾಗಿಯೇ ಮಿಂಚಿದರು.. 18 ಸಿನಿಮಾಗಳನ್ನ ಯಶ್ ಈವರೆಗೂ ಮಾಡಿದ್ದಾರೆ.. ಅಂದ್ಹಾಗೆ ಯಶ್ ಅವರ ಸಿನಿಮಾ ಜರ್ನಿ ಶುರುವಾಗಿ ಇಂದಿಗೆ 14 ವರ್ಷಗಳೇ ಪೂರ್ಣಗೊಂಡಿದೆ…
ಎಲ್ಲ ಅಭಿಮಾನಿಗಳು ಯಶ್ ಗೆ ಶುಭಕೋರುತ್ತಿದ್ದಾರೆ.. ವಿಶೇಷ ಅಂದ್ರೆ ಯಶ್ ಪತ್ನಿ , ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಸಿನಿಮಾ ಜರ್ನಿಗೂ ಇಂದು 14 ವರ್ಷಗಳು ಪೂರ್ಣಗೊಂಡಿದೆ.. ರಾಧಿಕಾ ಮತ್ತು ಯಶ್ ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾ ಮೂಲಕವೇ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದವರು.. ಇಬ್ಬರೂ ಸಹ ಮಿಂಚಿ , ಸ್ಟಾರ್ ಡಮ್ ಗಳಿಸಿದವರು.,..
ಇಬ್ಬರೂ ಮೊದಲು ಕಿರುತೆರೆಯಲ್ಲಿ ಕಾಣಿಸಿಕೊಂಡು ನಂತರ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಮೊದಲ ಬಾರಿಗೆ ತೆರೆಹಂಚಿಕೊಂಡಿದ್ದು , ಮೊದಲ ಸಿನಿಮಾದಲ್ಲೇ ಮೋಡಿ ಮಾಡಿದ್ದರು..
ಮೊಗ್ಗಿನ ಮನಸ್ಸು’ ಚಿತ್ರಕ್ಕೆ ಶಂಶಾಕ್ ನಿರ್ದೇಶನ ಮಾಡಿದ್ದರು. ಯಶ್, ರಾಧಿಕಾ ಪಂಡಿತ್ ಮಾತ್ರವಲ್ಲದೇ ಶುಭಾ ಪೂಂಜಾ, ಮಾನಸಿ, ರಾಜೇಶ್ ನಟರಂಗ ಮುಂತಾದವರು ಅಭಿನಯಿಸಿದ್ದರು. ಸಾಲು ಸಾಲು ಸಿನಿಮಾಗಳನ್ನ ಮಾಡಿ ತಮ್ಮ 10 ವರ್ಷಗಳ ಪ್ರೀತಿಯ ನಂತರ 5 ವರ್ಷಗಳ ಹಿಂದೆ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಮದುವೆಯ ನಂತರ ರಾಧಿಕಾ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.. ಯಶ್ 19 ಸಿನಿಮಾದ ಅಪ್ ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.,..
ಅಂದ್ಹಾಗೆ ಈ ಇಬ್ಬರೂ ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದಾರೆ.. ಒಟ್ಟಿಗೆ ಹಹಿಟ್ ಸಿನಿಮಾಗಳನ್ನೂ ನೀಡಿದ್ದಾರೆ.. ಸದ್ಯ ಇಬ್ಬರಿಗೂ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಿಷ್ ಮಾಡ್ತಾ ಇದ್ದಾರೆ..