ಮುಂಬೈ : ಭಾರತದ ಖ್ಯಾತ ಗಜಲ್ ಗಾಯಕ ಭೂಪಿಂದರ್ ಸಿಂಗ್ ವಿಧಿವಶರಾಗಿದ್ದಾರೆ.. ಭೂಪೇಂದರ್ ಸಿಂಗ್ (82) ಅವರು ಬಾಲಿವುಡ್‍ನಲ್ಲಿ ಹಲವು ಸೂಪರ್ ಹಿಟ್ ಗೀತೆಗಳಿಗೆ ಧ್ವನಿಯಾಗಿದ್ದರು..
ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಭೂಪಿಂದರ್ ಸಿಂಗ್ ಅವರಿಗೆ ಒಂದು ವಾರದ ಹಿಂದೆಯಷ್ಟೇ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ 7.45ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ..
ಅಮೃತಸರದಲ್ಲಿ ಜನಿಸಿದ ಭೂಪಿಂದರ್ ಸಿಂಗ್ ಬೆಳೆದಿದ್ದು, ದೆಹಲಿಯ ಪಶ್ಚಿಮ ಪಟೇಲ್ ನಗರದಲ್ಲಿ. ಆಲ್ ಇಂಡಿಯಾ ರೇಡಿಯೋ, ದೆಹಲಿ ಮತ್ತು ದೂರದರ್ಶನದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಗಾಯಕರಾಗಿ ಭೂಪಿಂದರ್ ಸಿಂಗ್ ಅವರು ಅನೇಕ ಪ್ರಸಿದ್ಧ ಹಾಡುಗಳಿಗೆ ಧ್ವನಿಯಾಗಿದ್ದಾಋಎ.. ಆನೆ ಸೆ ಉಸ್ಕೆ ಉಕೆ ಆಯೆ ಬಹರ್ ಸಿನಿಮಾದ – ಜೀನೆ ಕಿ ರಾಹ್ (1996), ಕಿಸಿ ನಜರ್ ಕೋ ತೇರಾ ಇಂತೇಜಾರ್ ಆಜ್ ಭಿ ಹೈ, ಸಿನಿಮಾದ – ಐತ್ಬಾರ್ (1985), ಬಿಟಿ ನಾ ಬಿಟೈ ರೈನಾ, ಚಲನಚಿತ್ರದ ಪರಿಚಯ (1972), ದಿಲ್ ದೂಂಡ್ತಾ ಹೈ ಸಿನಿಮಾದ – ಮೌಸಂ (1975) ಹೀಗೆ ಸಾಕಷ್ಟು ಹಿಟ್ ಹಾಡುಗಳನ್ನ ಅವರು ಹಾಡಿದ್ದಾರೆ… ಇವರ ನಿಧನಕ್ಕೆ ಸಿನಿಮಾರಂಗದವರು , ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ..