Biggboss Kannada 9
ಕನ್ನಡ ಅಷ್ಟೇ ಅಲ್ದೇ ಇತರೇ ಭಾಷೆಗಳಲ್ಲೂ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್… ಕನ್ನಡದಲ್ಲಿ ಈಗಾಗಲೇ 8 ಸೀಸನ್ ಗಳು ಮುಕ್ತಾಯಗೊಂಡಿದೆ..
ಇದೀಗ ಸೀಸನ್ 9 ಯಾವಾಗ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.. ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನಲ್ಲಿ ಪ್ರತಿ ವರ್ಷ ಬದಲಾವಣೆಗಳಾಗುತ್ತಲೇ ಇರುತ್ತೆ.. ಆದ್ರೆ ಈ ವರ್ಷ ಒಂದಲ್ಲ ಬದಲಾಗಿ ಹಿಂದಿಯ ಮಾದರಿಯಲ್ಲೇ ಎರೆಡೆರೆಡು ಬಿಗ್ ಬಾಸ್ ಶೋ ಪ್ರಸಾರವಾಗಲಿದೆ..
ಒಟಿಟಿ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ Voot ನಲ್ಲಿ ಡಿಜಿಟಲ್ ಆವೃತ್ತಿಯು ಪ್ರಸಾರವಾಗಲಿದೆ.
ಶೋ ಶುರುವಾಗುವುದಕ್ಕೂ ಮುನ್ನೆ ,, ಸೋಷಿಯಲ್ ಮೀಡಿಯಾದಲ್ಲಿ ಪ್ರತಿ ಸೀಸನ್ ನ ಮೊದಲಿಗೆ ನಡೆಯುವಂತಹದ್ದೇ ಚರ್ಚೆಗಳು ಶುರುವಾಗಿದೆ.. ಬಿಗ್ ಬಾಸ್ ಮನೆಗೆ ಎಂಟ್ರಿಯಾಗೋ ಸ್ಪರ್ಧಿಇಗಳು ಯಾರ್ಯಾರು ಅನ್ನೋ ಬಗ್ಗೆ..
ಈ ಬಾರಿ ಎರೆಡೆರೆಡು ಶೋ ಬೇರೆ ನಡೆಯಲಿದ್ದು , ಸ್ಪರ್ಧಿಗಳು ಹೆಚ್ಚೇ ಇರುತ್ತಾರೆ.. ಈಗಾಗಲೇ ಸ್ಪರ್ಧಿಗಳ ಬಗ್ಗೆ ಸೋಷಿಇಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ.. ಅಂದ್ಹಾಗೆ ಈ ಬಾರಿ ಸೋಷಿಯಲ್ ಮೀಡಿಯಾ ಸ್ಟಾರ್ ಗಳಿಗೂ ಚಾನ್ಸ್ ಸಿಗುವ ಸಾಧ್ಯತೆಗಳು ಹೆಚ್ಚಿವೆ.. ಈ ನಡುವೆ ಬಹುತೇಕ ನೆಟ್ಟಿಗರು ಕಾಫಿ ನಾಡು ಚಂದು ಭಾಗವಹಿಸಬಹುದೆಂದು ಅಂದಾಜಿಸಿದ್ದಾರೆ.. ಅಲ್ಲದೇ ಅವರನ್ನ ಮನೆಗೆ ಕರೆತರುವಂತೆ ಡಿಮ್ಯಾಂಡ್ ಸಹ ಮಾಡ್ತಾಯಿದ್ದಾರೆ..
ಅಷ್ಟೇ ಅಲ್ಲ, ಚಂದುಗೆ ಅವಕಾಶ ಕೊಡಬೇಕು ಎಂದು ನೆಟ್ಟಿಗರು ಪರಮೇಶ್ವರ್ ಗುಂಡ್ಕಲ್ ಬಳಿ ಮನವಿ ಕೂಡ ಮಾಡಿದ್ದಾರೆ.
ಕನ್ನಡದ ಬಿಗ್ ಬಾಸ್ ಈ ಬಾರಿ ಎರಡು ವೇದಿಕೆಗಳಲ್ಲಿ ದರ್ಶನ ಕೊಡಲಿದೆ. ಮೊದಲು Voots ಓಟಿಟಿಯಲ್ಲಿ ಪ್ರಸಾರವಾದರೆ, ಟಿವಿಗಾಗಿಯೇ ಮತ್ತೊಂದು ಶೋ ಚಿತ್ರೀಕರಣ ಮಾಡಲಾಗುವುದು ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ.
ಚಿಕ್ಕಮಗಳೂರು ಮೂಲದ ಚಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡು ಫೇಮಸ್ ಆಗಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಹಲವರಿಗೆ ಬರ್ತ್ಡೇ ವಿಶ್ ಮಾಡುವ ಮೂಲಕ ಅವರು ಜನರನ್ನ ಸೆಳೆದಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋಗಳು ವೈರಲ್ ಆಗಿವೆ. ಹಾಗಾಗಿ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ನೀಡಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಒತ್ತಾಯಿಸುತ್ತಿದ್ದಾರೆ.