ಭಾರತದ ಸ್ಟಾರ್ ನಿರ್ದೇಶಕರಾದ ಮಣಿರತ್ನಂ ಅವರಿಗೆ ಕೋವಿಡ್ ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯದ ಸ್ಥಿರತೆ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ..
ಅಂದ್ಹಾಗೆ ಮಣಿರತ್ನಂ ಅವರು ನಿರ್ದೇಶಿಸುತ್ತಿರುವ ಭಾರತದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ PS -1 ಪೊನ್ನಿಯನ್ ಸೆಲ್ವನ್ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಸೆನ್ಷೇಷನ್ ಕ್ರಿಯೇಟ್ ಮಾಡಿದೆ..
ಈ ಸಿನಿಮಾ 5 ಭಾಷೆಗಳಲ್ಲಿ 2 ಭಾಗದಲ್ಲಿ ಬರುತ್ತಿದ್ದು ಮೊದಲ ಭಾಗ ಸೆಪ್ಟೆಂಬರ್ 30 ಕ್ಕೆ ರಿಲೀಸ್ ಆಗಲಿದೆ… ಈ ಸಿನಿಮಾದಲ್ಲಿ ಎಲ್ಲಾ ಭಾಷೆಗಳ ಸ್ಟಾರ್ ಗಳಿದ್ದು ಬೆಟ್ಟದಷ್ಟು ನಿರೀಕ್ಷೆ ಹುಟ್ಟುಹಾಕಿದೆ..
ಮಣಿರತ್ನಂ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿ ಅಭಿಮಾನಿಗಳು ಆತಂಕದಲ್ಲಿದ್ದಾರೆ..