ಬಾಲಿವುಡ್ ನಟಿ ಕಂಗನಾ ರಣೌತ್ ಹಾಗೂ ವಿವಾದಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ವಿವಾದಗಳೇ ಕಂಗನಾರನ್ನ ಬಿಟ್ರೂ ವಿವಾದಗಳು ಕಂಗನಾ ಬೆನ್ನು ಬಿಡಲ್ಲ.. ಎಷ್ಟು ಒಳ್ಳೆ ನಟಿ ಎಂಬ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೋ ಅದಕ್ಕಿಂತ 100 ಪಟ್ಟು ವಿವಾದಗಳ ಮೂಲಕವೇ , ಸದಾ ಏನಾದ್ರೂ ಒಂದು ವಿಚಾರವನ್ನ , ಯಾರದರೂ ಒಬ್ರನ್ನ ವಿರೋಧಿಸುತ್ತಲೇ , ನೇರವಾಗಿ ಮಾತನಾಡ್ತಾ ದಿಟ್ಟತನ ಪ್ರದರ್ಶಿಸುವ ನಟಿ..
ಕಂಗನಾ ಉತ್ತಮ ನಟಿ ಕೂಡ… ತಮಿಳುನಾಡಿದ ಲೆಜೆಂಡರಿ ಸಿಎಂ ಜಯಲಲಿತಾ ಅವರ ಬಯೋಪಿಕ್ ‘ ತಲೈವಿ’ ಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಕಂಗನಾ ಈಗ ಭಾರತದ ದಿಟ್ಟ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಮಿಂಚಲು ತಯಾರಾಗಿದ್ದಾರೆ..
ಆದ್ರೆ ಇದೀಗ ಸಿನಿಮಾ ರಿಲೀಸ್ ಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ..
‘ಎಮರ್ಜೆನ್ಸಿ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಬಹುತೇಕ ಕಂಗನಾ ಇಂದಿರಾ ಗಾಂಧಿ ಅವರಂತೆಯೇ ಕಂಡಿದ್ದಾರೆ.
ಕಂಗನಾ ರಣಾವತ್ ಅವರೇ ಖುದ್ದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಬ್ಯುಸಿಯಾಗಿದ್ದಾರೆ.. ಚಿತ್ರದ ಫಸ್ಟ್ ಲುಕ್ ವೈರಲ್ ಆಗಿರುವ ಬೆನ್ನಲ್ಲೇ ಇಂದಿರಾ ಗಾಂಧಿ ಅವರ ಇಮೇಜ್ಗೆ ಧಕ್ಕೆ ತರಲು ಕಂಗನಾ ಈ ಪಾತ್ರ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.. ಅಲ್ಲದೇ ಕಾಂಗ್ರೆಸ್ ನಾಯಕಿ ಸಂಗೀತಾ ಅವರು ಈ ಸಿನಿಮಾ ರಿಲೀಸ್ ಗೂ ಮೊದಲೇ ನೋಡಬೇಕೆಂದು ಹಠ ಹಿಡಿದಿದ್ದಾರೆ..