ಕನ್ನಡದ ಜೋಷ್ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿಯಾದ ಬಬ್ಲಿ ನಜಟಿ ನಿತ್ಯಾ ಮೆನನ್ ಬಹುಭಾಷೆಗಳಲ್ಲಿ ಮಿಂಚಿದ್ದಾರೆ.. ದೊಡ್ಡ ಅಭಿಮಾನಿಗಳ ಬಳಗವನ್ನ ಹೊಂದಿದ್ದಾರೆ..
ಆದ್ರೆ ನಿತ್ಯಾ ಬಗ್ಗೆ ಟಾಲಿವುಡ್ ಮತ್ತು ಮಾಲಿವುಡ್ನಲ್ಲಿ ಒಂದು ಗುಸುಗುಸು ಶುರುವಾಗಿದೆ.. ನಿತ್ಯಾ ಮೆನನ್ ಶೀಘ್ರದಲ್ಲೇ ಜನಪ್ರಿಯ ಮಲಯಾಳಂ ನಾಯಕನೊಂದಿಗೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಭಾರೀ ಸೌಂಡ್ ಮಾಡ್ತಿದೆ..
ಮಾಲಿವುಡ್ನ ದೊಡ್ಡ ತಾರೆಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ ಆದ್ರರೆ ಯಾರೆಂದು ನಿಖರವಾಗಿ ತಿಳಿದುಬಂದಿಲ್ಲ…
ನಿತ್ಯಾ ಮೆನನ್ ಅವರ ಮುಂದಿನ ಸಿನಿಮಾ ಕಾನೂನು ನಾಟಕ ’19 (1) (ಎ)’ ವಿಜಯ್ ಸೇತುಪತಿ ಜೊತೆ ನಟಿಸಿದ್ದು, ಶೀಘ್ರದಲ್ಲೇ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಆಗಲಿದೆ. ಈ ವರ್ಷ ಆಗಸ್ಟ್ 18 ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿರುವ ಸನ್ ಪಿಕ್ಚರ್ಸ್ ನಿರ್ಮಾಣದ ಕಮರ್ಷಿಯಲ್ ಎಂಟರ್ಟೈನರ್ ‘ತಿರುಚಿತ್ರಾಂಬಲಂ’ ನಲ್ಲಿ ಧನುಷ್ ಅವರಿಗೆ ನಾಯಕಿಯರಲ್ಲಿ ನಿತ್ಯಾ ಕೂಡ ಒಬ್ಬರು.