ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾಗೆ ಟಾಲಿವುಡ್ ನಲ್ಲೂ ಬೇಡಿಕೆ ಕಮ್ಮಿಯಿಲ್ಲ.. ಕನ್ನಡದಿಂದ ಔಟ್ ಡೇಟೆಡ್ ಆಗಿದ್ದರೂ ಬಾಲಿವುಡ್ ನಲ್ಲಿಯೂ ಮಿಂಚುತ್ತಿದ್ದಾರೆ..
ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ಧಾರೆ.. ಕನ್ನಡ ಸಿನಿಮಾರಂಗದಿಂದ ಹಿಟ್ ಆದವರು.. ಸದ್ಯ ಕನ್ನಡ ಸಿನಿಮಾರಂಗದಿಂದ ದೂರವಿದ್ದಾರೆ..
ಅಂದ್ಹಾಗೆ ತಮಿಳಿನಲ್ಲಿ ವಿಜಯ್ ಅವರ 66 ನೇ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಅನ್ನೋದು ಎಲ್ರಿಗೂ ಗೊತ್ತಿದೆ..
ನಟಿ ರಷ್ಮಿಕಾ ಮಂದಣ್ಣ ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.
ತೆಲುಗು, ತಮಿಳು ಸಿನಿಮಾಗಳಲ್ಲಿ ಅಲ್ಲದೇ ಹಿಂದಿಯಲ್ಲೂ ಕೂಡ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಇಲ್ಲಿಯವರಗೆ ಆಕೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸಿನಿಮಾದಲ್ಲಿ ನಟಿಸಿದ್ದು, ಮಿಷನ್ ಮಜ್ನು ರಿಲೀಸ್ ಗೆ ಸಿದ್ಧವಾಗಿದೆ.
ಶೀಘ್ರದಲ್ಲಿಯೇ ಮತ್ತೊಂದು ಸಿನಿಮಾ ಗುಡ್ ಬೈ ಪ್ರೇಕ್ಷಕರ ಮುಂದೆ ಬರಲಿದೆ.
ಇದೆಲ್ಲದರ ನಡುವೆ ರಶ್ಮಿಕಾಗೆ ಮತ್ತೊಂದು ಅದೃಷ್ಟ ಒಲಿದು ಬಂದಿದೆ..
ಹೌದು..! ಮತ್ತೊಂದು ತಮಿಳಿನ ಸಿನಿಮಾಗೆ ಆಫರ್ ಸಿಕ್ಕಿದೆ.. ಅದು ಸಹ ಸ್ಟಾರ್ ನಟನ ಜೊತೆಗೆ ನಟಿಸುವ ಅದೃಷ್ಟ ಸಿಕ್ಕಿದೆ ‘ಕಿರಿಕ್’ ರಾಣಿಗೆ..
ಟಾಲಿವುಡ್ ನಲ್ಲಿ ಮಹೇಶ್ ಬಾಬು ನಂತರ ಈಗ ಕಾಲಿವುಡ್ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ಗೆ ನಾಯಕಿಯಾಗಿ ನಟಿಸಲು ರಶ್ಮಿಕಾ ಮಂದಣ್ಣಗೆ
ಅವಕಾಶ ಸಿಕ್ಕಕಿದೆ.. ಕಾಲಿವುಡ್ ನಟ ಚಿಯಾನ್ ವಿಕ್ರಮ್ ರ 61ನೇ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.. ಕಬಾಲಿ, ಕಾಲಾ ಖ್ಯಾತಿಯ ನಿರ್ದೇಶಕ ಪಾ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ನಾಯಕಿ ಎನ್ನಲಾಗ್ತಿದೆ..
ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ..