ಭರತ್ ವಿಷ್ಣುಕಾಂತ್ ಸಾರಥ್ಯದ ಭರತ್ ಫಿಲ್ಮ್ಸ್ ಪ್ರೊಡಕ್ಷನ್ ಲೋಗೋ ಲಾಂಚ್ ಮಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ… ಭರತ್ ಫಿಲ್ಮ್ಸ್ ನಡಿ ಮೂರು ಹೊಸ ಸಿನಿಮಾಗಳಿಗೆ ಮುನ್ನುಡಿ
ಪಾರ್ವತಮ್ಮ ರಾಜ್ ಕುಮಾರ್ ಸಹೋದರನ ಪುತ್ರ ಧ್ರುವನ್ ಹೀರೋ ಆಗಿ ಲಾಂಚ್ ಆಗಿರುವ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡ್ತಿದೆ. ಪೋಸ್ಟರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರವನ್ನು ಯುವ ಸಿನಿಮೋತ್ಸಾಹಿ ಭರತ್ ವಿಷ್ಣುಕಾಂತ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ರಿಲೀಸ್ ಗೂ ಮುನ್ನವೇ ಭರತ್ ತಮ್ಮದೇ ಭರತ್ ಫಿಲ್ಮಂ ಪ್ರೊಡಕ್ಷನ್ ಲೋಗೋ ಲಾಂಚ್ ಮಾಡಿ ಮೂರು ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ.
ಇತ್ತೀಚೆಗೆ ಖಾಸಗಿ ಹೋಟೆಲ್ ವೊಂದ್ರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಭರತ್ ಫಿಲ್ಮಂ ಪ್ರೊಡಕ್ಷನ್ ಲೋಗೋ ಲಾಂಚ್ ಮಾಡಿ ಭರತ್ ಅಂಡ್ ಟೀಂಗೆ ಶುಭ ಹಾರೈಸಿದರು.
ನಿರ್ಮಾಪಕ ಭರತ್ ವಿಷ್ಣುಕಾಂತ್ ಮಾತನಾಡಿ, ಸಿನಿಮಾ ಮಾಡುವುದು ದೊಡ್ಡದಲ್ಲ ಅದನ್ನು ಕಂಪ್ಲೀಟ್ ಮಾಡಬೇಕು ಅಂತಾ ಉಮಾಪತಿ ಸರ್ ಹೇಳಿದ್ದಾರೆ. ಜೊತೆಗೆ ನನಗೆ ಅವರು ಪ್ರೋತ್ಸಾಹ ಕೊಡ್ತಿದ್ದಾರೆ. ಈಗ ಜಾಸ್ತಿ ಮಾತನಾಡುವುದಿಲ್ಲ. ಸಿನಿಮಾ ಮಾಡಿ ಮುಗಿಸಿ ತೋರಿಸುತ್ತೇನೆ. ಯಾವತ್ತು ನಾವು ಮಾತನಾಡಬಾರದು. ನಮ್ಮ ಕೆಲಸ ಮಾತನಾಡಬೇಕು ಎಂದರು.
ನಿರ್ಮಾಪಕ ಉಮಾಪತಿ ಗೌಡ, ಒಬ್ಬ ನಿರ್ಮಾಪಕ ಯಾವಾಗಲೂ ಮುಂದೆ ಇರಬೇಕು. ಸಿನಿಮಾ ಶುರುವಾಗುದಕ್ಕೂ ಮುನ್ನ ನಿರ್ದೇಶಕರು ಕಥೆ ಮಾಡಿಕೊಳ್ಳುತ್ತಾರೆ. ಆ ಬಳಿಕ ನಿರ್ಮಾಪಕ ಬಳಿ ಹೋಗುತ್ತಾರೆ. ಪ್ರೊಡ್ಯೂಸರ್ ಇಡೀ ಟೀಂ ಸಾಕ್ತಾರೆ. ಆ ಬಳಿಕ ಏಕಾಂಗಿಯಾಗುವುದು ಪ್ರೊಡ್ಯೂಸರ್. ಥಿಯೇಟರ್ ಹತ್ತಿರ ದುಡ್ಡು ಕಲೆಕ್ಟ್ ಮಾಡಿ. ಕೊಡುವವರಿಗೆ ದೊಡ್ಡ ಕೊಡಬೇಕು. ಸಿನಿಮಾ ಅಂತಾ ಬಂದಾಗ ಚಿಕ್ಕದು ದೊಡ್ಡದು ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಆ ಸಿನಿಮಾ ಹೊರೆ ಹೊತ್ತವರಿಗೆ ಅದರ ಕಷ್ಟ ಗೊತ್ತಾಗುತ್ತದೆ. ಸಿನಿಮಾಗೆ ನಿರ್ಮಾಪಕನೇ ಮೊದಲ ಹೀರೋ. ಸಿನಿಮಾ ಎನ್ನುವುದು ಆಲದಮರ. ಭರತ್ ಅಂಡ್ ಟೀಂಗೆ ಒಳ್ಳೆದಾಗಲಿ ಎಂದರು.
ಯುವ ನಿರ್ದೇಶಕ ಪುನೀತ್ ನಿರ್ದೇಶನದಲ್ಲಿ ಯುವ ನಟ ಪ್ರೀತಮ್ ಶೆಟ್ಟಿ ನಟಿಸ್ತಿರುವ ಹೊಸ ಸಿನಿಮಾವನ್ನು ಭರತ್ ನಿರ್ಮಾಣ ಮಾಡ್ತಿದ್ದು, ಸತ್ಯಘಟನೆಯಾಧಾರಿತ ಈ ಚಿತ್ರದ ಶೂಟಿಂಗ್ ಆಗಸ್ಟ್ ತಿಂಗಳಾಂತ್ಯದಲ್ಲಿ ಶುರುವಾಗಲಿದೆ. ಕಂಪ್ಲೀಟ್ ರಾ ಜಾನರ್ ನ ಈ ಚಿತ್ರದ ಟೈಟಲ್ ಹಾಗೂ ಉಳಿದ ಸ್ಟಾರ್ಸ್ ಕಾಸ್ಟ್ ಬಗ್ಗೆ ಚಿತ್ರತಂಡ ಶೀರ್ಘದಲ್ಲಿ ಮಾಹಿತಿ ನೀಡಲಿದೆ.
ಭರತ್ ಫಿಲ್ಮಂ ಪ್ರೊಡಕ್ಷನ್ ಹೌಸ್ ನಡಿ ನಿರ್ಮಾಣವಾಗ್ತಿರುವ ಮೊತ್ತೊಂದು ಹೊಸ ಸಿನಿಮಾಗೆ ಯುವ ನಿರ್ದೇಶಕ ಕುಶಾಲ್ ಆಕ್ಷನ್ ಕಟ್ ಹೇಳಲಿದ್ದು, ಈ ಚಿತ್ರಕ್ಕೆ ದೈತ್ಯ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಶೀರ್ಘದಲ್ಲಿಯೇ ಸ್ಟಾರ್ ಕಾಸ್ಟ್ ಬಹಿರಂಗಪಡಿಸುವುದಾಗಿ ಚಿತ್ರತಂಡ ಹೇಳಿದೆ.
ಚಿಕ್ಕಮಗಳೂರಿನ ಬೆಡಗಿ, ಪಟಾಕ ಅಂತಾಲೇ ಖ್ಯಾತಿ ಪಡೆದಿರುವ ಬಹುಭಾಷಾ ನಟಿ ನಭಾ ನಟೇಶ್ ಸಹೋದರ ನಾಹುಶ್ ಚಕ್ರವರ್ತಿಯನ್ನು ಸಹ ಭರತ್ ಹೀರೋ ಆಗಿ ಇಂಡಸ್ಟ್ರೀಗೆ ಲಾಂಚ್ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಗಣೇಶ್ ಪರಶುರಾಮ್ ಸಾರಥ್ಯ ವಹಿಸಿಕೊಂಡಿದ್ದಾರೆ. ಉಳಿದ ಮಾಹಿತಿ ಸದ್ಯದಲ್ಲಿಯೇ ರಿವೀಲ್ ಮಾಡಲಿದೆ ಚಿತ್ರತಂಡ.