Brahmasthra : ಕೇಸರಿಯಾ ಹಾಡಿನಿಂದ ಟ್ರೋಲ್ ಆಗ್ತಿದೆ ‘ಬ್ರಹ್ಮಾಸ್ತ್ರ’…!! ಯಾಕೆ..??
ಇತ್ತೀಚೆಗಷ್ಟೇ ಬಾಲಿವುಡ್ ನ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಬ್ರಹ್ಮಾಸ್ತ್ರದ ಟ್ರೇಲರ್ ರಿಲೀಸ್ ಆಗಿದ್ದು , ಟ್ರೇಲರ್ ನೋಡಿರುವ ಫ್ಯಾನ್ಸ್ ಫಿದಾ ಆಗಿದ್ಧಾರೆ.. ಇದೊಂದು ಸೂಪರ್ ನ್ಯಾಚುರಲ್ , ಫ್ಯಾಂಟಸಿ ಥ್ರಿಲ್ಲರ್ ಸಿನಿಮಾವಗಿದ್ದು ಜನರಂತೂ ಸಿನಿಮಾ ಬಗ್ಗೆ ಥ್ರಿಲ್ ಆಗಿದ್ದಾರೆ..
ಸಿನಿಮಾದಲ್ಲಿ ರಣಬೀರ್ , ಆಲಿಯಾ , ಅಮಿತಾಬ್ , ಮೌನಿ ರಾಯ್ , ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಆದ್ರೆ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಟ್ರೇಲರ್ ಬಗ್ಗೆ ಸಾಕಷ್ಟು ನೆಟ್ಟಿಗರು ಕೆಂಡಕಾರಿದ್ದೂ ಉಂಟು..
ಯಾಕಂದ್ರೆ ಈ ಟ್ರೇಲರ್ ನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪ ಮಾಡಿದ್ರು.. ಕಾರಣ ದೇಗುಲದೊಳಗೆ ರಣಬೀರ್ ಶೂ ಧರಿಸಿದ್ದಾರೆ ಎಂದು ಟ್ರೇಲರ್ ನಲ್ಲಿ ಕೆಲವರು ಗುರುತಿಸಿದ್ದರು..
ಈ ಸಿನಿಮಾದ ಕೇಸರಿಯಾ ಹಾಡು ಈಗ ಬಿಡುಗಡೆಯಾಗಿದೆ. ಈ ಹಾಡು ಯೂಟ್ಯೂಬ್ ನಲ್ಲಿ ಉತ್ತಮ ವಿಕ್ಷಣೆಯನ್ನ ಪಡೆದುಕೊಳ್ಳುತ್ತಿದೆ. ಇದರ ಜೊತೆಗೆ ಟ್ರೋಲ್ ಗೂ ಒಳಗಾಗುತ್ತಿದೆ. ಈ ಹಾಡಿನಲ್ಲಿ ಬರುವ ಲವ್ ಸ್ಟೋರಿಯಾ ಎನ್ನುವ ಪದದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಲವ್ ಸ್ಟೋರಿಯನ್ ಪದ ಹಾಡಿನ ಸಾಹಿತ್ಯಕ್ಕೆ ಸೂಟ್ ಆಗುವ ಕುರಿತು ವಿವಿಧ ರೀತಿಯ ಮಿಮ್ಸ್ ಗಳು ಹರಿದಾಡುತ್ತಿವೆ.
ಈ ಹಾಡನ್ನು ಅರಿಜಿತ್ ಸಿಂಗ್ ಹಾಡಿದ್ದು, ಸಾಹಿತ್ಯವನ್ನು ಅಮಿತಾಭ್ ಭಟ್ಟಾಚಾರ್ಯ ಬರೆದಿದ್ದಾರೆ. ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ.
ಹಾಡಿನ ಸಾಹಿತ್ಯ ಟ್ರೋಲ್ ಆಗುತ್ತಿರುವುದರ ಕುರಿತು ರಣಬೀರ್ ಪ್ರತಿಕ್ರಿಯೇ ನಿಡಿದ್ದಾರೆ. ಮೀಮ್ಸ್ ಮತ್ತು ಟ್ರೋಲಿಂಗ್ ಜೀವನದ ಒಂದು ಭಾಗವಾಗಿದೆ. ಅವರು ಹಾಡಿನ ಪದವನ್ನ ಇಷ್ಟಪಟ್ಟಿದ್ದಾರೆ, “ಪ್ರೇಕ್ಷಕರು ಹಾಡನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ನನಗೆ ‘ಲವ್ ಸ್ಟೋರಿಯಾ’ ಬಿಟ್ ಇಷ್ಟವಾಯಿತು ಎಂದಿದ್ದಾರೆ.
ಬ್ರಹ್ಮಾಸ್ತ್ರ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಕೂಡ ನಟಿಸಿದ್ದಾರೆ. ಅಯನ್ ಮುಖರ್ಜಿ ಅವರ ನೇತೃತ್ವದಲ್ಲಿ, ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್ಲೈಟ್ ಪಿಕ್ಚರ್ಸ್ ನಿರ್ಮಾಣ ಸಾರಥ್ಯದಲ್ಲಿ ಸೆಪ್ಟೆಂಬರ್ 9 ರಂದು 5 ಭಾರತೀಯ ಭಾಷೆಗಳಲ್ಲಿ – ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.