ಕನ್ನಡದ ಜೋಷ್ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿಯಾದ ಬಬ್ಲಿ ನಜಟಿ ನಿತ್ಯಾ ಮೆನನ್ ಬಹುಭಾಷೆಗಳಲ್ಲಿ ಮಿಂಚಿದ್ದಾರೆ.. ದೊಡ್ಡ ಅಭಿಮಾನಿಗಳ ಬಳಗವನ್ನ ಹೊಂದಿದ್ದಾರೆ..
ಆದ್ರೆ ನಿತ್ಯಾ ಬಗ್ಗೆ ಟಾಲಿವುಡ್ ಮತ್ತು ಮಾಲಿವುಡ್ನಲ್ಲಿ ಒಂದು ಗುಸುಗುಸು ಶುರುವಾಗಿದೆ.. ನಿತ್ಯಾ ಮೆನನ್ ಶೀಘ್ರದಲ್ಲೇ ಜನಪ್ರಿಯ ಮಲಯಾಳಂ ನಾಯಕನೊಂದಿಗೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಭಾರೀ ಸೌಂಡ್ ಮಾಡ್ತಿದೆ..
ಆದ್ರೆ ಈ ಎಲ್ಲಾ ವದಂತಿಗಳಿಗೆ ‘ಮೈನಾ’ ಸುಂದರಿ ಸ್ಪಷ್ಟನೆ ನೀಡಿದ್ದಾರೆ..
ತಾವು ಯಾರೊಂದಿಗೂ ಡೇಟಿಂಗ್ ಮಾಡಿಲ್ಲ, ಯಾವ ಸ್ಟಾರ್ ನಟನನ್ನೂ ಮದುವೆ ಆಗುತ್ತಿಲ್ಲ ಎಂದು ನಿತ್ಯಾ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ರೂಮರ್ ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ..
ಅಲ್ಲದೇ ಮದುವೆ ಆಗುವ ಬಗ್ಗೆ ಯೋಚನೆ ಕೂಡ ಮಾಡಿಲ್ಲ. ಮದುವೆಯಾಗುವಷ್ಟು ಸಲುಗೆಯನ್ನು ಯಾರೊಂದಿಗೂ ನಾನು ಇಟ್ಟುಕೊಂಡಿಲ್ಲ. ಅನೇಕ ಸ್ಟಾರ್ ನಟರು ಆತ್ಮೀಯರಾಗಿದ್ದಾರೆ. ಹಾಗಂತ ಅವರನ್ನು ಮದುವೆ ಆಗುತ್ತಿದ್ದೇನೆ ಎನ್ನುವುದು ಸುಳ್ಳು. ನಾನು ನನ್ನ ಕೆಲಸದಲ್ಲಿ ಬ್ಯುಸಿ ಆಗಿದ್ದೇನೆ.. ಮದುವೆ ಆಗುವುದು ದೂರದ ಮಾತು ಎಂದು ಸ್ಪಷ್ಟನೆ ನೀಡಿದ್ದಾರೆ..