Samantha – Akshay kumar : ಊ ಅಂಟಾವಾ ಹಾಡಿಗೆ ಭರ್ಜರಿ ಡ್ಯಾನ್ಸ್ : ಅಕ್ಷನ್ ಸಂಭಾವನೆಗೆ ತಮಾಷೆ ಮಾಡಿದ ಸ್ಯಾಮ್
ನಾಗಚೈತನ್ಯ ಜೊತೆಗೆ ತಮ್ಮ ನಾಲ್ಕು ವರ್ಷದ ದಾಂಪತ್ಯಕ್ಕೆ ಇತಿಶ್ರೀ ಹಾಡಿದ ಟಾಲಿವುಡ್ ನ ಕ್ಯೂಟ್ ಬ್ಯೂಟಿ ಸಮಂತಾ ,, ಬೋಲ್ಡ್ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.. ಗ್ಲಾಮರಸ್ ಆಗೂ ಅಭಿಮಾನಿಗಳ ಹಾರ್ಟ್ ಗೆ ಬೆಂಕಿ ಇಡ್ತಾರೆ.. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಿರುವ ಸ್ಯಾಮ್ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್..
10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಕೆಲ ತಿಂಗಳುಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ..
ಇವರ ಡಿವೋರ್ಸ್ ಸುದ್ದಿಯಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದರು.. ಇವರಿಬ್ಬರೂ ಸಹ ಈ ವಿಚಾರವಾಗಿ ಮೌನವಾಗಿದ್ರೂ ನೆಟ್ಟಿಗರು ಸೈಲೆಂಟ್ ಇರಲ್ಲ.. ಈವರೆಗೂ ಇಬ್ಬರ ಅಭಿಮಾನಿಗಳೂ ಪರಸ್ಪರರನ್ನ ಟ್ರೋಲ್ ಮಾಡ್ತಾ ಬಂದಿದ್ದಾರೆ.. ಇಬ್ಬರೂ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ..
ಸಮಂತಾ ಬಾಲಿವುಡ್ , ಹಾಲಿವುಡ್ ಗೂ ಪಾದಾರ್ಪಣೆ ಮಾಡ್ತಾ ಇದ್ದಾರೆ.. ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಯಶೋಧಾ , ಹಾಗೂ ವಿಜಯ್ ದೇವರಕೊಂಡ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಖುಷಿಯಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ..
ಇದೆಲ್ಲದರ ನಡುವೆ ಕೆಲ ಟಾಕ್ ಶೋಗಳಲ್ಲೂ ಸಮಂತಾ ಭಾಗಿಯಾಗ್ತಿದ್ದಾರೆ.. ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಸ್ಯಾಮ್ ಭಾಗವಹಿಸಿದ್ದರು..
2 ವರ್ಷಗಳ ನಂತರ, ಕರಣ್ ಜೋಹರ್ ಕಾಫಿ ವಿತ್ ಕರಣ್ ಶೋ ನ ಮುಂದಿನ ಸೀಸನ್ ನಡೆಸಿಕೊಡ್ತಿದ್ದು , ಇದು ಒಟಿಟಿಯಲ್ಲಿ ಪ್ರಸಾರವಾಗ್ತಿದೆ.. 3 ನೇ ಸಂಚಿಕೆಯಲ್ಲಿ, ಸಮಂತಾ ರುತ್ ಪ್ರಭು ಮತ್ತು ಅಕ್ಷಯ್ ಕುಮಾರ್ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
7 ಹೀರೋಗಳೊಂದಿಗೆ ನಟಿಸಿದ ಜಾನಿ ದುಷ್ಮನ್ ಚಿತ್ರವು ಬಾಲಿವುಡ್‌ನಲ್ಲಿ ಯೋಗ್ಯ ಸ್ಥಾನವನ್ನು ಪಡೆಯಲು ಸಹಾಯ ಮಾಡಿತು ಎಂದು ಈ ವೇಳೆ ಅಕ್ಷಯ್ ಬಹಿರಂಗಪಡಿಸಿದರು. ಅವರು ತಿಂಗಳಿಗೆ 5000 ರೂಪಾಯಿಗಳನ್ನು ಗಳಿಸುತ್ತಿದ್ದ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದರು ಮತ್ತು ಇದ್ದಕ್ಕಿದ್ದಂತೆ ಜಾಹೀರಾತು ಏಜೆನ್ಸಿಯೊಂದು 2 ಗಂಟೆಗಳ ಚಿತ್ರೀಕರಣಕ್ಕೆ 21,000 ರೂ ನೀಡಿತು ಎಂದೂ ಕೂಡ ತಿಳಿಸಿದರು.
ಇತ್ತ ಸೌತ್ ಇಂಡಸ್ಟ್ರಿಗೆ ತಾನು ಹೇಗೆ ಬಂದೆ ಎಂಬುದನ್ನೂ ಸಮಂತಾ ಬಹಿರಂಗಪಡಿಸಿದ್ದಾರೆ. ಆಕೆಯ ತಂದೆ ತನ್ನ ಸಾಲವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿದ ಸಮಯ, ಅವರು ತನ್ನ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.
ಆದಾಗ್ಯೂ, ಚರ್ಚೆಯ ನಂತರ ಸಮಂತಾ ಮತ್ತು ಅಕ್ಷಯ್ ಇಬ್ಬರೂ ಫನ್ನಿ ಮಾತುಕತೆ ನಡೆಸಿದ್ದಾರೆ.. ಈ ವೇಳೆ ಸ್ಯಾಮ್ “ನಿಮ್ಮ ಒಂದು ದಿನದ ವೆಚ್ಚವೇ ನನ್ನ ಸಂಪೂರ್ಣ ಚಿತ್ರದ ಸಂಭಾವನೆ” ಎಂದು ಅಕ್ಷಯ್ ಕುಮಾರ್ ಅವರ ಸ್ಯಾಲರಿ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ..
ಅಲ್ಲದೇ ಇಬ್ಬರೂ ಸಹ ಪುಷ್ಪ ಸಿನಿಮಾದ ಊ ಅಂಟಾವಾ ಮಾವಾ ಊಹೂ ಅಂಟಾವಾ ಮಾವ ಹಾಡಿಗೆ ಹೆಜ್ಜೆ ಹಾಕಿದ್ದಾರೆ..