“ಪ್ರೀತಿಸಬೇಡ” ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಕನ್ನಡದಲ್ಲಿ “ಪ್ರೀತಿಸಬೇಡ” ಎಂಬ ಟೈಟಲ್ ಜೊತೆಗೆ “ತಿಳಿದು ತಿಳಿಯದ ವಯಸ್ಸಿನಲ್ಲಿ” ಎಂಬ ಸಬ್ ಟೈಟಲ್ ನೊಂದಿಗೆ ತೆಲುಗಿನ “ಪ್ರೇಮಿಂಚೋಡು” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಸಂಪೂರ್ಣ ವಿಭಿನ್ನ ರೀತಿಯಲ್ಲಿ ತಯಾರಾದ ಚಿತ್ರ ಇದಾಗಿದ್ದು, ಹದಿಹರೆಯ ವಯಸ್ಸಿನವರ ಸುತ್ತ ನಡೆಯುವ ಕಥಾಹಂದರವನ್ನೊಳಗೊಂಡು ಬಿಡುಗಡೆಯಾಗುತ್ತಿರುವ ಮೊದಲ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದೆ.
ಈ ಚಿತ್ರವನ್ನು ಸಿರಿನ್ ಶ್ರೀರಾಮ್ ತಮ್ಮ ಬ್ಯಾನರ್ ನಲ್ಲಿ ನಿರ್ಮಿಸಿದ್ದು ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅನುರೂಪ್, ದೇವಮಲ್ಲಿಶೆಟ್ಟಿ, ಸನಾಲಿ ಗರ್ಜೆ, ಸಾರಿಕಾ, ಮಾನಸ, ಯಶವಂತ್ ಪೆಂಡ್ಯಾಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರವು ನಿರ್ಮಾಣ ಹಂತವನ್ನು ಮುಗಿಸಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡವು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮವನ್ನು ನಡೆಸಿದ್ದು ನಟಿ ಗಾಯತ್ರಿ ಗುಪ್ತಾ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ನಂತರ ಗಾಯತ್ರಿ ಅವರು ಮಾತನಾಡಿ “ನನಗೆ 10 ವರ್ಷಗಳ ಹಿಂದಿನಿಂದಲೂ ಈ ನಿರ್ದೇಶಕರು ಗೊತ್ತು, ಈ ಪ್ರೀತಿಸಬೇಡ (ಪ್ರೇಮಿಂಚೋಡು) ಫಸ್ಟ್ ಲುಕ್ ಆಕರ್ಷಕವಾಗಿದೆ. ಈ ಚಿತ್ರವು ಖಂಡಿತವಾಗಿಯೂ ಯಶಸ್ಸನ್ನು ಕಾಣುತ್ತದೆ ” ಎಂದರು.
ಈ ಚಿತ್ರದ ನಿರ್ದೇಶಕ ಸಿರಿನ್ ಶ್ರೀರಾಮ್ ಅವರು ಮಾತನಾಡಿ “ಇದು ಮೊದಲ ಪ್ಯಾನ್ ಇಂಡಿಯಾ ಇಂಡಿಪೆಂಡೆಂಟ್ ಚಿತ್ರವಾಗಿದ್ದು ತೆಲುಗು ಮತ್ತು ಹಿಂದಿಯಲ್ಲಿ ನೇರವಾಗಿ ಬಿಡುಗಡೆಗೆಯಾಗಲಿದೆ. ತಮಿಳು, ಕನ್ನಡ, ಮಲಯಾಳಂನಲ್ಲಿ ಈ ಚಿತ್ರದ ಡಬ್ಬಿಂಗ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗುವುದು. ಈ ಚಲನಚಿತ್ರದ ಆಶಯ ಎಲ್ಲರಿಗೂ ಇಷ್ಟವಾಗಲಿದೆ” ಎಂದರು.
ಕೊನೆಗೆ ಚಿತ್ರನಟ ಅನುರೂಪ್, ನಟಿ ಮತ್ತು ಸಹ ನಟರು ಹಂಚಿಕೊಂಡ ಅಭಿಪ್ರಾಯ ಒಟ್ಟಾರೆಯಾಗಿ ಹೀಗಿತ್ತು: “ಈ ಚಿತ್ರದಲ್ಲಿ ಕೆಲಸ ಮಾಡಲು ನಾವು ಪುಣ್ಯ ಮಾಡಿದ್ದೇವೆ. ಎಲ್ಲರೂ ಪ್ರೀತಿಯಲ್ಲಿ ಬೀಳುವುದು ಹೇಗೆ ಎಂದು ಚಿತ್ರ ಮಾಡುತ್ತಾರೆ ಆದರೆ ನಾವು ಡಿಫರೆಂಟ್, ಪ್ರೀತಿಯಲ್ಲಿ ಬೀಳದೇ ಇರುವುದು ಹೇಗೆ ಎಂಬ ಚಿತ್ರ ಮಾಡಿದ್ದೇವೆ. ಎಲ್ಲರೂ ಈ ಚಿತ್ರವನ್ನು ಪ್ರೀತಿಸುತ್ತಾರೆ ಮತ್ತು ಬೆಂಲಿಸುತ್ತಾರೆ ಎಂಬ ನಂಬಿಕೆ ಇದೆ”