Iyana Sulthana – RGV : ರಾಮ್ ಗೋಪಾಲ್ ವರ್ಮಾರ ಕಾರಣದಿಂದ ಮನೆಯವರಿಂದ ಶಾಶ್ವತವಾಗಿ ದೂರಾದ ಇಯಾನಾ ಸುಲ್ತಾನಾ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾರು ಏನು ಅಂದ್ರೂ ತಲೆ ಕಡೆಸಿಕೊಳ್ಳದ ರಾಮ್ ಗೋಪಾಲ್ ವರ್ಮಾ ಒಂದು ರೀತಿಯಾಗಿ ಸೋಲೋ ಮ್ಯಾನ್ ಇದ್ದಂತೆ.
ತಮಗೆ ಇಷ್ಟವಾಗಿದ್ದನ್ನೇ ಮಾಡುತ್ತಾ ಸುದ್ದಿಯಾಗುತ್ತಲೇ ಇರುತ್ತಾರೆ. ಆತ ಮಾಡುವ ಟ್ವೀಟ್ ಎಷ್ಟೋ ಜನರ ನಿದ್ರೆ ಕದಿಯುತ್ತೆ… ಮಾಡೆಲ್ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಪಬ್ ಗಳಲ್ಲಿ ತಮ್ಮಿಷ್ಟ ಬಂದಂತೆ ಇರೋದು.. ಟ್ರೋಲ್ ಆಗೋದು ಇದೆಲ್ಲಾ ಅವರಿಗೆ ಅಭ್ಯಾಸ ಹಾಗೂ ಹವ್ಯಾಸವೂ ಆಗಿಬಿಟ್ಟಿದೆ..
ಅಂದ್ಹಾಗೆ ರಾಮ್ ಗೋಪಾಲ್ ವರ್ಮಾ ಕಾರಣಕ್ಕೆ ಕುಟುಂಬದಿಂದ ದೂರಾದ ಬಗ್ಗೆ ಟಾಲಿವುಡ್ ನಟಿ ನಟಿ ಇನಾಯಾ ಸುಲ್ತಾನ್ ಹಂಚಿಕೊಂಡಿದ್ದಾರೆ. ತಮ್ಮ ಕುಟುಂಬದವರಿಂದ ದೂರಾಗೋದಕ್ಕೆ ರಾಮ್ ಗೋಪಾಲ್ ವರ್ಮಾ ಕಾರಣವೆಂದು ಆರೋಪಿಸಿದ್ದಾರೆ.
ಇನಾಯಾ ಸಿನಿಮಾ ರಂಗದಲ್ಲಿ ಅವಕಾಶ ಹುಡುಕುತ್ತಿದ್ದಾಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪರಿಚಯವಾಗಿತ್ತು. ತೀರಾ ಆತ್ಮೀಯರೆನಿಸ್ಸಿದ್ದರಂತೆ.. ಹಾಗಾಗಿ ಇನಾಯಾ ಸುಲ್ತಾನ್ ಅವರನ್ನು ತಮ್ಮ ಬರ್ತಡೇ ಪಾರ್ಟಿಗೆ ಕರೆದಿದ್ದರಂತೆ RGV..
ಆಗ ಅತಿಯಾದ ಮದ್ಯಪಾನದಿಂದ ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ.. ಡಾನ್ಸ್ ಮಾಡುತ್ತಲೇ ರಾಮ್ ಗೋಪಾಲ್ ವರ್ಮಾ ಇನಾಯಾಗೆ ಚುಂಬಿಸಿದ್ದಾರೆ.. ತಬ್ಬಿಕೊಂಡು ಮುತ್ತಿಟ್ಟಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ಇಯಾನಾ ಮನೆಯವರೂ ನೋಡಿದ್ದರು.. ಹೀಗಾಗಿ ಸಿಟ್ಟಲ್ಲಿ ಇಯಾನಾರರನ್ನ ತಮ್ಮಿಂದ ದೂರ ಮಾಡಿದರಂತೆ.. ಈ ಬಗ್ಗೆ ಇಯಾನಾ ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದಾರೆ..