RRR ಸಿನಿಮಾದ ಬಗ್ಗೆ ಕೀಳಾಗಿ ಮಾತನಾಡಿದ ಬ್ರಿಟಿಷ್ ಇತಿಹಾಸ ಪ್ರಾಧ್ಯಾಪಕ : ಭಾರತೀಯರಿಂದ ಕ್ಲಾಸ್..!!
ಎಸ್.ಎಸ್.ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ನಟನೆಯ ತ್ರಿಬಲ್ ಆರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದು ಒಟಿಟಿಯಲ್ಲೂ ಅಬ್ಬರಿಸಿದೆ..
ಸಿನಿಮಾ ಬಗ್ಗೆ ಇದೀಗ ಬ್ರಿಟೀಷ್ ಪ್ರೊಫೆಸರ್ ಆಡಿಇರುವ ಮಾತುಗಳಿಂದ ಭಾರತೀಯರು ಕೆರಳಿದ್ದಾರೆ..
RRR ಸಿನಿಮಾದ ಬಗ್ಗೆ ಪ್ರತಿಷ್ಟಿತ ಕೆಂಬ್ರಿಡ್ಜ್ ಯುನಿವರ್ಸಿಟಿಯ ಇತಿಹಾಸ ಪ್ರಾಧ್ಯಾಪಕ ರಾಬರ್ಟ್ ಟಾಂಬ್ಸ್ ವಿಮರ್ಶೆ ಮಾಡಿದ್ದಾರೆ.. ಚಿತ್ರದಲ್ಲಿ ತೋರಿಸಿರುವ ಬ್ರಿಟಿಷರ ಕ್ರೂರತನ ನಿಜವಲ್ಲ. ಅದು ತಿರುಚಲಾಗಿದ್ದು, ಇದು ಅಸಹ್ಯದ ಪರಮಾವಧಿವಾಗಿದೆ… ಚಿತ್ರದಲ್ಲಿ ತೋರಿಸಿರುವುದು 1920 ರ ಅಂದಿನ ಬ್ರಿಟಿಷರ ಅಟ್ಟಹಾಸವನ್ನಲ್ಲ, ಬದಲಿಗೆ ಇಂದಿನ ಪ್ರಸ್ತುತ ಭಾರತದ ಅಟ್ಟಹಾಸವನ್ನು ಎಂದು ಹೇಳಿದ್ದಾರೆ.
RRR ಸಿನಿಮಾ ಭಾರತದಲ್ಲಿನ ಬ್ರಿಟಿಷ್ ಇತಿಹಾಸವನ್ನು ದೂಷಿಸುವ ರೀತಿಯಲ್ಲಿ ನೋಡುತ್ತದೆ. ಈ ಚಿತ್ರವನ್ನು ಅಜ್ಞಾನದಿಂದ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಗವರ್ನರ್ ಸ್ಕಾಟ್ ಹಾಗೂ ಅವರ ಪತ್ನಿಯ ಹತ್ಯೆಯ ಚಿತ್ರಣವೂ ಕೇವಲ ಅಸಹ್ಯಕರವಷ್ಟೇ ಅಲ್ಲ, ಮೂರ್ಖತನದಿಂದ ಕೂಡಿದೆ ಎಂದಿದ್ದಾರೆ..
ಭಾರತೀಯ ಸಿನಿಮಾಗಳು ಜನರ ಭಾವನೆಗಳನ್ನು ಬಂಡವಾಳವನ್ನಾಗಿಟ್ಟುಕೊಂಡು ಹೇಗೆ ವಿಜೃಂಭಿಸುತ್ತವೆ ಮತ್ತು ಜಗತ್ತಿಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿರುವ ಬ್ರಿಟಿಷರ ಬಗ್ಗೆ ಭಾರತದಲ್ಲಿ ಹೇಗೆ ತಪ್ಪು ಅಭಿಪ್ರಾಯ ಮೂಡಿಸುತ್ತಾರೆ ಎಂದು ಲೇಖನದಲ್ಲಿ ವಿವರಿಸಿದ್ದಾರೆ.
ಆದರೆ ಕೆರಳಿರುವ ಭಾರತೀಯರು ಸಿನಿಮಾದಲ್ಲಿ ನಿಮ್ಮ ನಿಜವಾದ ಬಣ್ಣ ತೋರಿಸಿರುವುದಕ್ಕೆ ಸಿಟ್ಯಾಕೆ ಉರಿಯಾಕೆ ಎಂದು ಪ್ರಶ್ನಿಸಿದ್ದಾರೆ.