Vikranth Rona : ಟೈಮ್ ಟ್ರಾವೆಲ್ಲಾ..??? ನಿರೂಪ್ ಭಂಡಾರಿ ಸ್ಪಷ್ಟನೆ..!!
ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಭಾರರತದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾಗಳ ಪೈಕಿ ಒಂದು.. ಕನ್ನಡ , ತಗೆಲುಗು , ಹಿಂದಿ , ಇಂಗ್ಲಿಷ್ ಸೇರಿದಂತೆ ಸುಮನಾರು 14 ಭಾಷೆಗಳಲ್ಲಿ ಸಿನಿಮಾ ಜುಲೈ 28 ರಂದು 3ಡಿಯಲ್ಲಿ ರಿಲೀಸ್ ಆಗುತ್ತಿದೆ..
ಸಿನಿಮಾದ ಗ್ಲಿಂಪ್ಸ್ , ಟೀಸರ್ , ಟ್ರೇಲರ್ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡಿದ್ದು , ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ..
ಸಿನಿಮಾ ತಂಡ ಪ್ರಚಾರದಲ್ಲಿ ತೊಡಗಿದೆ. ಇನ್ನೂ ಸಿನಿಮಾದಲ್ಲಿ ಪ್ರಮುಯಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರೂಪ್ ಭಂಡಾರಿ ಸಂದರ್ಶನವೊಂದ್ರಲ್ಲಿ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ..
ಅನೇಕರಲ್ಲಿ ವಿಕ್ರಾಂತ್ ರೋಣ ಸಿನಿಮಾ ಟೈಮ್ ಟ್ರಾವೆಲಿಂಗ್ ಕಥೆರ ಹೊಂದಿದ್ಯಾ ಎಂಬ ಗೊಂದಲವಿದೆ.. ಆದ್ರೆ ಇದಕ್ಕೆ ನಿರೂಪ್ ಭಂಡಾರಿ ಅವರು ಸ್ಪಷ್ಟನೆ ನೀಡಿದ್ದುಉ ಇದು ಟೈಮ್ ಟ್ರಾವೆಲಿಂಗ್ ಸಿನಿಮಾವಲ್ಲ ಎಂದಿದ್ದಾರೆ.
ನಾರ್ಮಲ್ ಆಡಿಯನ್ಸ್ ಗೂ ಕಥೆ ಸುಲಭವಾಗಿ ಅರ್ಥವಾಗುತ್ತೆ.. ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ.. ಇದೇ ವೇಳೆ ಸಿನಿಮಾದ ನಿರ್ದೇಶಕ ಹಾಗೂ ತಮ್ಮ ಸಹೋದರ ಅನೂಪ್ ಭಂಡಾರಿ ಬಗ್ಗೆ ಮಾತನಾಡ್ತಾ ತಮ್ಮ ತಂದೆ ಹಾಗೂ ಅನೂಪ್ ನನಗೆ ಸಿನಿಮಾ ಗುರುಗಳು.. ಅವರಿಂದಲೇ ನಾನು ಸಿನಿಮಾ ಇಂಡಸ್ಟ್ರಿಗೆ ಬರಲು ಸಾಧ್ಯವಾಯ್ತು.. ರಂಗೀತರಂಗ ಸಿನಿಮಾದಿಂದಲೇ ನಾನು ಸಿನಿಮಾ ಜರ್ನಿ ಶುರು ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ..