Vikranth Rona2 ಬರುತ್ತಾ..?? ಬರಲ್ವಾ..?? ನಿರೂಪ್ ಹೇಳಿದ್ದೇನು..??
ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಭಾರರತದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾಗಳ ಪೈಕಿ ಒಂದು.. ಕನ್ನಡ , ತಗೆಲುಗು , ಹಿಂದಿ , ಇಂಗ್ಲಿಷ್ ಸೇರಿದಂತೆ ಸುಮನಾರು 14 ಭಾಷೆಗಳಲ್ಲಿ ಸಿನಿಮಾ ಜುಲೈ 28 ರಂದು 3ಡಿಯಲ್ಲಿ ರಿಲೀಸ್ ಆಗುತ್ತಿದೆ..
ಸಿನಿಮಾದ ಗ್ಲಿಂಪ್ಸ್ , ಟೀಸರ್ , ಟ್ರೇಲರ್ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡಿದ್ದು , ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ..
ಸಿನಿಮಾ ತಂಡ ಪ್ರಚಾರದಲ್ಲಿ ತೊಡಗಿದೆ. ಇನ್ನೂ ಸಿನಿಮಾದಲ್ಲಿ ಪ್ರಮುಯಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರೂಪ್ ಭಂಡಾರಿ ಸಂದರ್ಶನವೊಂದ್ರಲ್ಲಿ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ..
ಇದೇ ವೇಳೆ ನಿರ್ದೇಶನದಲ್ಲಿ ನನಗೆ ಆಸಕ್ತಿ ಇದೆ ಎಂದಿದ್ದಾರೆ ನಿರೂಪ್ ಭಂಡಾರಿ.. ರಂಗೀತರಂಗ ಸಿನಿಮಾಗೆ ನಾನು ಅನೂಪ್ ಭಂಡಾರಿಗೆ ಅಸೋಸಿಯೇಟ್ ಆಗಿಯೇ ಶುರು ಮಾಡಿದ್ದು , ಆಗಿನ್ನೂ ಗೊತ್ತಿರಲಿಲ್ಲ ಯಾರು ನಟನೆ ಮಾಡ್ತಾರೆ ಅಂತ.. ಹೊಸಬರು ನಟಿಸಲಿ ಎಂದಾಗ ನನ್ನನ್ನೂ ಆಡಿಷನ್ ಗೆ ಕೇಳಲಾಯ್ತು.. ಆಗ ನಾನು ಆಯ್ಕೆಯಾಗಿ ನಟಿಸಿದ್ದು..
ಆದ್ರೆ ಅನೂಪಪ್ ಭಂಡಾರಿ ಅವರು ಈ ಬಗ್ಗೆ ಒಂದು ಕ್ಲಾರಿಟಿಯಲ್ಲಿದ್ದರು.. ನಾನೇ ಈ ರೋಲ್ ಮಾಡಬೇಕೆಂದು..
ಆದ್ರೆ ಆಗಿನಿಂದ್ಲೂ ನಿರ್ದೇಶನದಲ್ಲಿ ಆಸಕ್ತಿಯಿದೆ.. ಸ್ಕ್ರಿಪ್ಟ್ ಕೂಡ ಬರೆದಿದ್ದೀನಿ.. ಆದ್ರೆ ನಿರ್ದೇಶನ ಬಹಳ ದೊಡ್ಡ ಜವಾಬ್ದಾರಿ.. ಟೈಮ್ ಬಂದಾಗ ಮಾಡ್ತೇನೆ ..
ವಿಕ್ರಾಂತ್ ರೋಣ 2 ಬಗ್ಗೆಯೂ ಮಾತನಾಡಿದ್ದಾರೆ.. ಬರಬಹುದು , ನನಗೆ ಗೊತ್ತಿಲ್ಲ , ಕಿಚ್ಚ ಸುಸೀಪ್ ಅವರು ಅನೂಪ್ ಅವರಿಗೆ ಬಿಟ್ಟ ವಿಚಾರ ಎನ್ನುತ್ತಾ , ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ..