ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಇತ್ತೀಚೆಗೆ ಅವರ ನಟನೆಯ ಪೃಥ್ವಿ ರಾಜ್ ಸಿನಿಮಾ ರಿಲೀಸ್ ಆಗಿ ಫ್ಲಾಪ್ ಆಗಿದೆ..
ಅಕ್ಷಯ್ ಕುಮಾರ್ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ… ಅಂದ್ಹಾಗೆ ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ನಟ ಕೂಡ ಅವರೇ ಆಗಿದ್ದಾರೆ.. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತವೆ..
ವಾರ್ಷಿಕವಾಗಿ ಅತಿ ಹೆಚ್ಚು ಹಣ ಗಳಿಸುವ ವಿಶ್ವ ನಟರ ಪಟ್ಟಿಯಲ್ಲಿ ಸಹ ಅಕ್ಷಯ್ ಕುಮಾರ್ ಹೆಸರಿದೆ. ಫೋರ್ಬ್ಸ್ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಹೆಸರು ಗಳಿಸಿದ ಏಕೈಕ ಭಾರತೀಯ ನಟ ಅಕ್ಷಯ್ ಕುಮಾರ್ ಆಗಿದ್ದಾರೆ..
ಇದೀಗ ಆದಾಯ ತೆರಿಗೆ ಇಲಾಖೆಯು ಅಕ್ಷಯ್ ಗೆ ಮೆಚ್ಚುಗೆ ಪತ್ರವನ್ನು ಕಳಿಸಿದ್ದು, ಕಳೆದ ಐದು ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ನಟ ಎಂಬ ಖ್ಯಾತಿಗೆ ಅಕ್ಷಯ್ ಪಾತ್ರರಾಗಿದ್ದಾರೆ.
ಮೂಲಗಳ ಪ್ರಕಾರ 2019 ರಲ್ಲಿ ಅಕ್ಷಯ್ ಕುಮಾರ್ ಸುಮಾರು 30 ಕೋಟಿ ರುಪಾಯಿ ಹಣವನ್ನು ತೆರಿಗೆಯಾಗಿ ಪಾವತಿಸಿದ್ದರು. ಇನ್ನು ಈ ವರ್ಷ ಅಕ್ಷಯ್ ಕುಮಾರ್ ಸುಮಾರು 60 ಕೋಟಿ ಹಣವನ್ನು ಆದಾಯ ತೆರಿಗೆ ಹಾಗೂ ಇನ್ನಿತರೆ ತೆರಿಗೆಗಳಾಗಿ ಪಾವತಿಸಿದ್ದಾರೆ ಎನ್ನಲಾಗುತ್ತಿದೆ. ಕಾರಣಕ್ಕೆ ಆದಾಯ ತೆರಿಗೆ ಇಲಾಖೆಯು ಪ್ರಶಂಸಾ ಪತ್ರವನ್ನು ಅಕ್ಷಯ್ ಕುಮಾರ್ ಗೆ ಕಳಿಸಿದೆ.