ಮಾಲಿವುಡ್ ನಟಿ ಅಂಜಲಿ ನಾಯರ್ ಮತ್ತು ಪತಿ ಅಜಿತ್ ರಾಜು ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದು , ನಟಿ ಈ ಸಂತಸದ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು , ಅಭಿಮಾನಿಗಳು ಅವರಿಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಅಂಜಲಿ ನಾಯರ್ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ದೃಶ್ಯಂ 2’ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದರು..
ಅಂಜಲಿ ನಾಯರ್ ಕಳೆದ ನವೆಂಬರ್ನಲ್ಲಿ ಅಜಿತ್ ರಾಜು ಅವರನ್ನು ವಿವಾಹವಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು.
ಅಜಿತ್ ರಾಜು ಅವರು ಜಾಹೀರಾತು ಚಿತ್ರ ನಿರ್ಮಾಪಕರಾಗಿದ್ದಾರೆ ಮತ್ತು ಲಾಲ್ ಜೋಸ್ ಅವರ ನಿರ್ದೇಶನದ ಚಿತ್ರ ‘ನಲ್ಪತಿಯೊನ್ನು’ ಸೇರಿದಂತೆ ಹಲವಾರು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ತಮಿಳಿನ ಹೆಸರಾಂತ ನಿರ್ದೇಶಕ ವೆಂಕಟ್ ಪ್ರಭು ಅವರ ಜೊತೆ ಕೂಡ ಕೆಲಸ ಮಾಡಿದ್ದಾರೆ.
ಮತ್ತೊಂದೆಡೆ, ಅಂಜಲಿ ನಾಯರ್ ಅವರು 1994 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ‘ಮಾನತೆ ವೆಲ್ಲಿತೆರು’ ನಲ್ಲಿ ಬಾಲ ಕಲಾವಿದೆಯಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದರು..