ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಭಾರರತದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾಗಳ ಪೈಕಿ ಒಂದು.. ಕನ್ನಡ , ತಗೆಲುಗು , ಹಿಂದಿ , ಇಂಗ್ಲಿಷ್ ಸೇರಿದಂತೆ ಸುಮನಾರು 14 ಭಾಷೆಗಳಲ್ಲಿ ಸಿನಿಮಾ ಜುಲೈ 28 ರಂದು 3ಡಿಯಲ್ಲಿ ರಿಲೀಸ್ ಆಗುತ್ತಿದೆ..
ಸಿನಿಮಾದ ಗ್ಲಿಂಪ್ಸ್ , ಟೀಸರ್ , ಟ್ರೇಲರ್ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡಿದ್ದು , ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ..
ಸಿನಿಮಾದ ಬಗ್ಗೆ ಮತ್ತೊಂದು ಸೆನ್ಷೇಷನಲ್ ಸುದ್ದಿ ಹರಿದಾಡ್ತಿದೆ.. ಅದೇನೆಂದ್ರೆ ಬಾಹುಬಲಿ , ಕೆಜಿಎಫ್ ಪುಷ್ಪ , ಮಾದರಿಯಲ್ಲೇ ಈ ಸಿನಿಮಾದ ಪಾರ್ಟ್ 2 ಬರಬಹುದು ಅನ್ನೋದು..
ವಿಕ್ರಾಂತ್ ರೋಣ ಭಾಗ 2 ಬರಲಿದೆ ಎನ್ನುವ ಸುಳಿವು ಸಿಕ್ಕಿದೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸೀಕ್ವೆಲ್ ಬಗ್ಗೆ ಸುಳಿವು ಕೊಟ್ಟಿದ್ದಾರೆ. ವಿಕ್ರಾಂತ್ ರೋಣ 2 ಮಾಡುವ ಎಲ್ಲಾ ಅವಕಾಶಗಳು ಇದೆ.
ಇದೆಲ್ಲದರ ನಡುವೆ ಈಗ ವಿಕ್ರಾಂತ್ ರೋಣ ರಿಲೀಸ್ ಅಪ್ ಡೇಟ್ಸ್ ಕೂಡ ಸಿಗುತ್ತಿದೆ.. ಅಂದ್ಹಾಗೆ ವಿಶ್ವಾದ್ಯಂತ ರಿಲೀಸ್ ಆಗಲಿರುವ ವಿಕ್ರಾಂತ್ ರೋಣ ಸಿನಿಮಾ ಸುಮಾರು 3500 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಾಣುತ್ತಿದೆ… ಪಾಕಿಸ್ತಾನವೂ ಸೇರಿದಂತೆ 27 ದೇಶಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ..
ಈ ಬಗ್ಗೆ ನಿರ್ಮಾಪಕ ಜಾಕ್ ಮಂಜು ಅವರು ಮಾಹಿತಿ ನೀಡಿದ್ದಾರೆ… ಈಗಾಗಲೇ ಸಿನಿಮಾಗಾಗಿ ಅಡ್ವಾನ್ಸ್ ಬುಕ್ಕಿಂಗ್ ಸಹ ಆರಂಭವಾಗಿದೆ..
ಕರ್ನಾಟಕದಲ್ಲಿ 425ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಬಾಲಿವುಡ್ ನಲ್ಲಿ 900 ಥಿಯೇಟರ್ಸ್, ಟಾಲಿವುಡ್ ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್ಸ್ ವಿದೇಶಗಳಲ್ಲಿ 800 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗ್ತಿದೆ..