ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದಾಗಿರೋ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪ್ರಚಾರದಲ್ಲಿ ಅಮಿರ್ ಖಾನ್ ಬ್ಯುಸಿಯಾಗಿದ್ದಾರೆ.. ಸಿನಿಮಾಗೆ ಇದೀಗ ಸೋಲಿನ ಆತಂಕ ಎದುರಾಗಿದೆ..
ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಮತ್ತೆ ಕೇಳಿ ಬರುತ್ತಿದೆ. ಈ ಹಿಂದೆ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಕೊಟ್ಟ ಹೇಳಿಕೆಗಳು ಸಿನಿಮಾಗೆ ಕಂಟಕವಾಗುವಂತೆ ಕಾಣ್ತಿವೆ..
ಅಮೀರ್ ಖಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದು ವ್ಯರ್ಥ. ಈ ಆಚರಣೆ ಅಪ್ರಯೋಜಕ. ಇದರ ಬದಲು ಬಡ ಮಕ್ಕಳಿಗೆ ಅದೇ ದುಡ್ಡಿನಲ್ಲಿ ಸಹಾಯ ಮಾಡಬಹುದು ಎಂದಿದ್ದರು. ಇದೇ ಹೇಳಿಕೆ ಈಗ ಮತ್ತೆ ವೈರಲ್ ಆಗ್ತಿದೆ.. ಅಷ್ಟೇ ಅಲ್ಲ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನೋಡುವುದು ವ್ಯರ್ಥ. ಈ ಸಿನಿಮಾದ ನೋಡುವುದರ ಬದಲಾಗಿ ಅದೇ ದುಡ್ಡಿನಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡಬಹುದು ಎನ್ನುವ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.
ಅಲ್ಲದೇ ಈ ಹಿಂದೆ ಬಾಲಿವುಡ್ ನೆಪೊಟಿಸಂ ಬಗ್ಗೆ ಮಾತನಾಡುತ್ತಾ ನಟಿ ಕರೀನಾ ಕಪೂರ್ ನಮ್ಮ ಸಿನಿಮಾಗಳನ್ನು ನೋಡಲೇಬೇಡಿ, ಸಿನಿಮಾಗಳನ್ನು ನೋಡುವಂತೆ ಯಾರಿಗೂ ಬಲವಂತವಿಲ್ಲ ಎಂದಿದ್ದರು. ಈಗ ಇದೇ ಹೇಳಿಕೆಯನ್ನ ಬಳಸಿ ಟ್ರೋಲ್ ಮಾಡಲಾಗುತ್ತಿದೆ.
ಅಂದ್ಹಾಗೆ ಆಗಸ್ಟ್ 11 ರಂದು ಲಾಲ್ ಸಿಂಗ್ ಚಡ್ಡಾ ವಿಶ್ವಾದ್ಯಂತ ರಿಲೀಸ್ ಆಗ್ತಿದೆ..