ಭಾರತೀಯ ಸಿನಿಮಾರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದೊಡ್ಡ ಫ್ಯಾಂಡಮ್ ಇದೆ… ದೇಶ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ.. ಕೋಟಿ ಕೋಟಿ ಆಸ್ತಿ ಇದೆ.. ಹೆಸರಿದೆ.. ಎಲ್ಲವೂ ಇದೆ.. ಆದ್ರೆ ರಜನಿಕಾಂತ್ ಅವರ ಜೀವನದಲ್ಲಿ ನೆಮ್ಮದಿಯ ಕೊರತೆಯಿದ್ಯಂತೆ.. ಹೀಗಂತ ಖುದ್ದು ತಲೈವಾ ಅವರೇ ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದಾರೆ..
ಹೌದು 71 ವರ್ಷದ ರಜನಿಕಾಂತ್ ಅವರ ವಯಕ್ತಿಕ ಜೀವನದಲ್ಲಿ ಸಾಕಷ್ಟು ಕೊರಗಿದೆ.. ವಯಕ್ತಿಕವಾಗಿ ರಜನಿಕಾಂತ್ ಅವರು ಖುಷಿಯಾಗಿಲ್ಲ.. ನೆಮ್ಮದಿಯಿಲ್ಲ. ಇದನ್ನ ಅವರೇ ಹೇಳಿಕೊಂಡಿದ್ದಾರೆ.. ಹೌದು..!! ತಮ್ಮ ಬದುಕಿನಲ್ಲಿ 10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲ ಅಂತಾ ಇತ್ತೀಚಿನ ಸಂದರ್ಶನವೊಂದರಲ್ಲಿ ರಜನೀಕಾಂತ್ ಅವರೇ ಹೇಳಿರುವುದು ಇದೀಗ ಸಖತ್ ವೈರಲ್ ಆಗಿದೆ.
ಅವರು ಅನಾರೋಗ್ಯದಿಂದ ಬಳಲಿ ರಾಜಕೀಯದಿಂದಲೂ ಹಿಂದೆ ಸರಿದಿದ್ದು , ಇತ್ತೀಚೆಗೆ ಅವರ ಹಿರಿಇಯ ಪುತ್ರಿ ಐಶ್ವರ್ಯ ಅವರ ದಾಂಪತ್ಯ ಮುರಿದು ಬಿದ್ದದ್ದು ಇದೆಲ್ಲದರಿಂದ ರಜನಿಕಾಂತ್ ಅವರು ಕೊರಗಿದ್ಧಾರೆ ಎಂಬುವುದು ಅವರ ಹೇಳಿಕೆಯಿಂದ ಗೊತ್ತಾಗ್ತಿದೆ.. ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯ ಸ್ಟಾರ್ ನಟ ಧನುಷ್ ಜೊತೆಗೆ ವಿವಾಹದ 18 ವರ್ಷಗಳ ನಂತರ ಈ ವರ್ಷದ ಆರಂಭದಲ್ಲಿ ಅಂದ್ರೆ ಜನವರಿ 17 ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದಾರೆ.. ಮಗಳ ಡಿವೋರ್ಸ್ ರಜನಿಕಾಂತ್ ಅವರ ಮನಸ್ಸಿಗೆ ನೋವುಂಟುಮಾಡಿರಬಹುದೆಂಬ ಚರ್ಚೆಗಳಿವೆ..