ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ನ್ಯೂಡ್ ಅವತಾರದ ನಂತರ ಬೆತ್ತಲಾಗಿ ಮ್ಯಾಗಜಿನ್ ಗೆ ಫೋಟೋ ಶೂಟ್ ಮಾಡಿಸಿದ್ದ ರಣವೀರ್ ಸಿಂಗ್ ಅಭಿಮಾನಿಗಳ ಉಬ್ಬೇರುವಂತೆ ಮಾಡಿದ್ದರು.. ಅನೇಕ ಬಾಲಿವುಡ್ಡಿಗರು ಅವರ ಈ ಬೋಲ್ಡ್ ಅವತಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು… ಇದೀಗ ರಣ್ ವೀರ್ ಸಿಂಗ್ ಅವರ ಅವರ ಬೆತ್ತಲೆ ಫೋಟೋ ಶೂಟ್ ವಿರುದ್ಧ ದೂರು ದಾಖಲಾಗಿದೆ..
ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡು, ಸಮಾಜ ಸ್ವಾಸ್ತ್ಯವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮುಂಬೈನ ಶ್ಯಾಮ್ ಮಂಗರಮ್ ಫೌಂಡೇಶನ್ ಮುಂಬೈನಲ್ಲಿ ದೂರು ದಾಖಲಿಸಿದ್ದು , ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಟರು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಫೌಂಡೇಶನ್ ಆಗ್ರಹಿಸಿದೆ. ಅಲ್ಲದೇ ರಣವೀರ್ ತಮ್ಮ ಅಭಿಮಾನಿಗಳ ಬಳಿ ಕ್ಷಮೆಯಾಚಿಸುವಂತೆಯೂ ಆಗ್ರಹಿಸಲಾಗಿದೆ..