777Charlie – OTT ಯಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ರಿಲೀಸ್ ಯಾವಾಗ..?? ಡೇಟ್ ರಿವೀಲ್..!!
ರಕ್ಷಿತ್ ಶೆಟ್ಟಿ ನಟನೆಯ ಕಿರಣ್ರಾಜ್ ನಿರ್ದೇಶನದ ‘777 ಚಾರ್ಲಿ’ ಒಟಿಟಿ ವೇದಿಕೆಗೆ ಬರಲು ದಿನಾಂಕ ನಿಗದಿಯಾಗಿದೆ. ಥಿಯೇಟರಗಳಲ್ಲಿ ಪ್ರೇಕ್ಷಕರ ಮನಸೂರೆಗೊಳಿಸಿ ಕಣ್ಣೀರು ಹಾಕಿಸಿದ್ದ ಚಿತ್ರವನ್ನ ಥೀಯೇಟರ್ ಗಳಲ್ಲಿ ಮಿಸ್ ಮಾಡಿಕೊಂಡವರು ಆದಷ್ಟು ಬೇಗ ಮೆನಯಲ್ಲಿಯೇ ಕಣ್ತುಂಬಿಕೊಳ್ಳಬಹುದು.
ಕಳೆದ ಜೂನ್ 10ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ 25 ದಿನಗಳನ್ನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಜುಲೈ 29 ಕ್ಕೆ ಚಿತ್ರ 50 ದಿನಗಳನ್ನ ಪೂರೈಸುವ ಹಿನ್ನಲೆಯಲ್ಲಿ 777 ಚಾರ್ಲಿ OTT ಯಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ವೂಟ್ ಸೆಲೆಕ್ಟ್ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.
ಬೀದಿ ನಾಯಿಗಳ ರಕ್ಷಣೆ, ಪೋಷಣೆ ಕುರಿತ ಸಂದೇಶವಿರುವ ಈ ಚಿತ್ರದಲ್ಲಿ ‘ಧರ್ಮ’ನ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದರು. ಧರ್ಮ–ಚಾರ್ಲಿಯ ಭಾವನಾತ್ಮಕ ಪಯಣ ಪ್ರೇಕ್ಷಕರನ್ನು ಸೆಳೆದಿತ್ತು. ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲೇ ಕಿರಣ್ರಾಜ್ ಖ್ಯಾತಿ ಪಡೆದಿದ್ದರು.