ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾದ ಕ್ರಾಂತಿ ಈಗಾಗಲೇ ರಾಜ್ಯದಲ್ಲಿ ಶುರುವಾಗಿಬಿಟ್ಟಿದೆ.. ಒಂದೆಡೆ ಮಾಧ್ಯಮದವರು ಡಿ ಬಾಸ್ ಸಿನಿಮಾವನ್ನ ಬಾಯ್ಕಾಟ್ ಮಾಡುವ ಪ್ಲಾನ್ ನಲ್ಲಿದ್ರೆ ,, ಮತ್ತೊಂದ್ ಕಡೆ ದಾಸನ ಅಭಿಮಾನಿಗಳು ಮೀಡಿಯಾದವರ ಎದುರು ತೊಡೆ ತೊಟ್ಟು ಅದ್ಧೂರಿಯಾಗಿ ಸಿನಿಮಾವನ್ನ ಪ್ರಮೋಷನ್ ಮಾಡ್ತಾ ಇದ್ದಾರೆ..
ಫ್ಯಾನ್ಸ್ ದಚ್ಚು ಸಿನಿಮಾವನ್ನ ರಾಜ್ಯಾದ್ಯಂತ ಸಖತ್ ಅದ್ಧೂರಿಯಾಗಿಯೇ ರಾಜಾರೋಷವಾಗಿ ಪ್ರಚಾರ ಮಾಡ್ತಾ ಇದ್ದಾರೆ.. ಈಗಿನಿಂದಲೇ ರಾಜ್ಯದಲ್ಲಿ ಕ್ರಾಂತಿ ಜಾತ್ರೆ ಶುರುವಾಗಿಬಿಟ್ಟಿದೆ.. ಈಗಾಗಲೇ ಸಿನಿಮಾದ ಥೀಮ್ ಪೋಸ್ಟರ್, ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿ ಕುತೂಹಲ ಹೆಚ್ಚಿಸಿದೆ..
ಈ ನಡುವೆ ಅಭಿಮಾನಿಗಳಿಗೆ ದರ್ಶನ್ ಗುಡ್ ನ್ಯೂಸ್ ನೀಡಿದ್ದಾರೆ.. ಕ್ರಾಂತಿ ಚಿತ್ರ ತಂಡ,ಇತ್ತೀಚೆಗೆ ಪೋಲ್ಯಾಂಡ್ ನಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿದ್ದು, ಅಲ್ಲಿಂದ ವಾಪಸ್ ಆದ ಬಳಿಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರಕ್ಕೆ ಡಬ್ಬಿಂಗ್ ಪ್ರಾರಂಭಿಸಿದ್ದಾರೆ.
ದರ್ಶನ್ ಡಬ್ಬಿಂಗ್ ಸ್ಟೂಡಿಯೋದಲ್ಲಿರುವ ಫೋಟೊವನ್ನ ಚಿತ್ರತಂಡ ಟ್ವೀಟ್ ಮಾಡಿದ್ದು, ವಾಯ್ಸ್ ಆಫ್ ಕ್ರಾಂತಿ ಎಂಬ ಶೀರ್ಷಿಕೆ ನೀಡಿದೆ. ವಿ ಹರಿಕೃಷ್ಣ ಮೊದಲ ಭಾರಿಗೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದು,ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ.
ಸಿನಿಮಾವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ ಮೀಡಿಯಾ ಹೌಸ್ ಸ್ಟೂಡಿಯೋ ಬ್ಯಾನರ್ ನ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ.
ಕ್ರಾಂತಿ ಚಿತ್ರದ ಮೂಲಕ ಮೂರನೇ ಬಾರಿಗೆ ರಚಿತಾ ರಾಮ್ ದರ್ಶನ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸುಮಲತಾ ಅಂಬರೀಷ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
.@dasadarshan enters dubbing studio for #Kranti The#Challengingstar starts dubbing for his role in the upcoming multilingual commercial entertainer from today. Film is helmed by @harimonium
prod @shylajanag & @bsuresha #MediaHouseStudio banner
* @TheRavichandraV @RachitaRamDQ pic.twitter.com/4Ppo5oyzUF— A Sharadhaa (@sharadasrinidhi) July 25, 2022